janadhvani

Kannada Online News Paper

ಸೌದಿ: ಟ್ರಾಫಿಕ್ ಕ್ಯಾಮೆರಾ ಮೂಲಕ ವಾಹನ ಇನ್ಶೂರೆನ್ಸ್ ಉಲ್ಲಂಘನೆ ಪತ್ತೆ – ಅ.1 ರಿಂದ ಪ್ರಾರಂಭ

ಇಲೆಕ್ಟ್ರಾನಿಕ್ ಕ್ಯಾಮೆರಾ ವ್ಯವಸ್ಥೆಯ ಮೂಲಕ ನಿಗಾ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ

ರಿಯಾದ್: ವಾಹನ ವಿಮೆ ಉಲ್ಲಂಘನೆಯನ್ನು ಪತ್ತೆಹಚ್ಚಲು ಟ್ರಾಫಿಕ್ ಕ್ಯಾಮೆರಾಗಳ ಮೂಲಕ ನಿಗಾ ವ್ಯವಸ್ಥೆ ಸೌದಿ ಅರೇಬಿಯಾದಲ್ಲಿ ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿದೆ. ಈ ಕುರಿತು ಸಂಚಾರ ವಿಭಾಗದವರು ‘ಎಕ್ಸ್’ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ದೇಶದ ಎಲ್ಲಾ ನಾಗರಿಕರು ಮತ್ತು ನಿವಾಸಿಗಳು ಸಂಚಾರ ನಿಯಮಗಳು ಮತ್ತು ಸೂಚನೆಗಳನ್ನು ಅನುಸರಿಸುವಂತೆ ಸಂಚಾರ ಇಲಾಖೆ ತಿಳಿಸಿದೆ. ಅಪಘಾತಗಳ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ತಮ್ಮ ವಾಹನಗಳಿಗೆ ವಿಮೆ ಮಾಡಬೇಕೆಂದು ಅಧಿಕಾರಿಗಳು ನೆನಪಿಸಿದರು.

ಇಲೆಕ್ಟ್ರಾನಿಕ್ ಕ್ಯಾಮೆರಾ ವ್ಯವಸ್ಥೆಯ ಮೂಲಕ ನಿಗಾ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯಲ್ಲಿ ಯಾವುದೇ ವಿಮೆ ಮಾಡದ ವಾಹನವನ್ನು ಪತ್ತೆ ಹಚ್ಚುವ ಮತ್ತು ಉಲ್ಲಂಘನೆಯನ್ನು ತಕ್ಷಣವೇ ದಾಖಲಿಸುವ ವ್ಯವಸ್ಥೆ ಇದಾಗಿದೆ.

error: Content is protected !! Not allowed copy content from janadhvani.com