ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ನಿರ್ದೇಶನದಂತೆ ಮುಡಿಪು ಝೋನಲ್ ವತಿಯಿಂದ ನಡೆಸಲಾಗುವ ಮಾಸಿಕ ಫತ್ಹುಲ್ ಮುಈನ್ ದರ್ಸ್ ಗೆ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾ ನಾಇಬ್ ಖಾಝಿ ಅಬ್ದುಲ್ ರಹ್ಮಾನ್ ಮದನಿ ಮೂಳೂರು ಉಸ್ತಾದ್ ನೇತೃತ್ವ ನೀಡಿದರು.
ಝೋನಲ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸ-ಅದಿ ಅಲ್ ಅಫ್ಲಲಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಡಿಪು ಮುದರ್ರಿಸ್ ಅಬ್ದುಲ್ ರಹ್ಮಾನ್ ಸಖಾಫಿ ಉದ್ಘಾಟಿಸಿದರು.
ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಅಬ್ಬಾಸ್ ಸಖಾಫಿ ಕೊಡಂಚಿಲ್ ಮೊದಲಾದವರು ಶುಭ ಹಾರೈಕೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಅನುಸ್ಮರಣೆ ಮತ್ತು ವಾರ್ಷಿಕ ಕೌನ್ಸಿಲ್ ನಡೆದವು.
ಆರಂಭದಲ್ಲಿ ಕಾರ್ಯದರ್ಶಿ ಸಿದ್ದೀಕ್ ಸಅದಿ ಸ್ವಾಗತಿಸಿದರು.
ಕೊನೆಯಲ್ಲಿ ಇಕ್ಬಾಲ್ ಫಾಳಿಲಿ ಧನ್ಯವಾದ ಸಲ್ಲಿಸಿದರು.