ಕನಾ೯ಟಕ ಮುಸ್ಲಿಂ ಜಮಾಅತ್ ಕಾಜೂರು ಸೆಕ್ಟರ್ ಇದರ ವತಿಯಿಂದ ದಿನಾಂಕ 25.08.2023 ರಂದು ಕಿಲ್ಲೂರು ಆಶಿಕ್ ಮನ್ಝಿಲ್ ನಲ್ಲಿ ಸವ೯ಧರ್ಮಿಯರ ಸೌಹಾದ೯ ಒಗ್ಗೂಡುವಿಕೆಯು ಕಾಜೂರು ಸರ್ಕಲ್ ಅಧ್ಯಕ್ಷರಾದ ದಿಡುಪೆ ಮೊಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಸ್ಮಾಯಿಲ್ ಫೈಝಿ ಉಸ್ತಾದರು ದುಆ ನಿರ್ವಹಿಸಿದರು.

ಪ್ರಧಾನ ಕಾರ್ಯದರ್ಶಿಯವರಾದ ಅಬ್ದುರ್ರ ಹ್ಮಾನ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ತುಂಗಪ್ಪ ಪೂಜಾರಿ ಕಾಜೂರು, ವೀರಪ್ಪ ದೇವಾಡಿಗ ಬಂಗಾಡಿ ತಮ್ಮ ಬಾಲ್ಯ ಕಾಲದ ಸೌಹಾರ್ದದ ಬದುಕನ್ನು ಹಂಚಿಕೊಂಡರು. ಪ್ರತಿಷ್ಠಿತ ಕಾಜೂರು ದರ್ಗಾ ಶರೀಫ್ ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಮುಖ್ಯ ಭಾಷಣ ಮಾಡಿ ಕೋಮು ಸೌಹಾರ್ದತೆಯ ಅನಿವಾರ್ಯತೆಯನ್ನು ತಿಳಿಸಿದರು.
ಕಾಜೂರು ದರ್ಗಾ ಶರೀಫಿನ ಪ್ರಧಾನ ಕಾರ್ಯದರ್ಶಿಯೂ, ಎಸ್‌ವೈಎಸ್ ಬೆಳ್ತಂಗಡಿ ಝೋನ್ ಕೋಶಾಧಿಕಾರಿಯೂ ಆದ ಜೆ.ಎಚ್. ಸಿದ್ದೀಕ್ ಕಾಜೂರ್, ಝೋನ್ ಸದಸ್ಯರಾದ K. P ಮೊಹಮ್ಮದ್, ಕಿಲ್ಲೂರು ಮಸೀದಿ ಉಸ್ತುವಾರಿ ಹಂಝತ್, K ಮೊಹಮ್ಮದ್ ಕಿಲ್ಲೂರು ಹಾಗೂ ಎರ್ಮಾಳ, ಕಿಲ್ಲೂರು, ಪೆರ್ದಾಡಿ, ಕಾಜೂರು ಯುನಿಟ್ ಸೆಕ್ಟರ್ ಇದರ ನೇತಾರರು ಪಾಲ್ಗೊಂಡಿದ್ದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ