janadhvani

Kannada Online News Paper

SSF ಗೋಲ್ಡನ್‌ 50 ಅಂಗವಾಗಿ ಶಾಂತಿನಗರದಲ್ಲಿ ಆಗಸ್ಟ್ 25 ಕ್ಕೆ ಪೀಪಲ್ ಕಾನ್ಪೆರನ್ಸ್

ಮಂಗಳೂರು: ಧಾರ್ಮಿಕ , ಸಾಮಾಜಿಕ ಮತ್ತು ಶೈಕ್ಷಣಿಕ ‌ರಂಗ ದಲ್ಲಿ ಅತೀ ಮುಂಚೂಣಿಯಲ್ಲಿ ಕಾರ್ಯಾಚರಣೆ ಯಲ್ಲಿರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಎಸ್‌ ಎಸ್ ಎಫ್ ಸಂಘನೆಗೆ 50 ರ ಸಂಭ್ರಮ . ಸೆಪ್ಟೆಂಬರ್ 10 ರಂದು ಬೆಂಗಳೂರು ಪ್ಯಾಲೇಸ್ ಮೈದಾನದಲ್ಲಿ ಬಹಳ ದೊಡ್ಡ ಸಮಾವೇಶ ನಡೆಯಲಿದೆ.

ಇದರ ಪ್ರಚಾರದ ಅಂಗವಾಗಿ ರಾಜ್ಯಾದ್ಯಂತ ಅಲ್ಲಲ್ಲಿ ವಿವಿಧ ಸಮಾಜಮುಖಿ‌ ಕಾರ್ಯಕ್ರಮ ಗಳು ನಡೆಯುತ್ತಿದ್ದು. ಆಗಸ್ಟ್ 25 ರಂದು 4.30 ಕ್ಕೆ ಸರಿಯಾಗಿ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಮಂಗಳೂರು ಡಿವಿಷನ್ ವ್ಯಾಪ್ತಿಯ ಶಾಂತಿ ನಗರ ಜಂಕ್ಷನಲ್ಲಿ ಯುನಿಟ್ ಪೀಪಲ್ಸ್ ಕಾನ್ಪೆರನ್ಸ್ ನಡೆಯಲಿದೆ.

ಈ ಕಾರ್ಯಕ್ರಮ ದಲ್ಲಿ ಮುಖ್ಯ ಬಾಷಣಗಾರರಾಗಿ ರಾಜ್ಯಾಧ್ಯಕ್ಷ ಎಚ್ ಐ ಸುಪ್ ಯಾನ್ ಸಖಾಫಿ ಹಾಗೂ ಎಸ್ ವೈ ಎಸ್ ಜಿಲ್ಲಾ ನಾಯಕ ಬಷೀರ್ ಮದನಿ‌ ಕುಳೂರು ಭಾಗವಹಿಸಲಿದ್ದಾರೆ. ಅಲ್ಲದೆ ಸಂಘಟನೆಯ ಜಿಲ್ಲಾ, ಡಿವಿಷನ್, ಸೆಕ್ಟರ್ ಯುನಿಟ್‌ ಹಾಗೂ ಸುನ್ನಿ ಸಂಘ ಕುಟುಂಬದ ನಾಯಕರು , ಕಾರ್ಯಕರ್ತರು , ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ನಾಯಕ ಅಜ್ ಮಲ್ ಕಾವೂರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com