janadhvani

Kannada Online News Paper

SYS ಕಡಬ ಝೋನ್ ವತಿಯಿಂದ ಗ್ಲೋರಿಯಸ್ ಇಂಡಿಯಾ ಕಾರ್ಯಕ್ರಮ

ಕಡಬ;ಆ 20: ರಾಷ್ಟ್ರ ನಿರ್ಮಾಣದಲ್ಲಿ ಮುಸ್ಲಿಮರು ಎಂಬ ಧ್ಯೇಯ ವಾಕ್ಯದಲ್ಲಿ ಗ್ಲೋರಿಯಸ್ ಇಂಡಿಯಾ ಕಾರ್ಯಕ್ರಮವು ಸುನ್ನೀ ಯುವಜನ ಸಂಘ SYS ಕಡಬ ಝೋನ್ ವತಿಯಿಂದ ದಿನಾಂಕ 20-08-2023 ಸೋಮವಾರದಂದು ಕಡಬದಲ್ಲಿ ನಡೆಯಿತು.

ಕಡಬ ಝೋನ್ ಅಧ್ಯಕ್ಷರಾದ ಶಾಫಿ ಸಖಾಫಿ ಕೊಕ್ಕಡ ಅಧ್ಯಕ್ಷತೆ ವಹಿಸಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಶಹೀದಾದ ಮುಸ್ಲಿಂ ನಾಯಕರ ವಿವರಣೆಯನ್ನು ಈ ಸಂದರ್ಭದಲ್ಲಿ ವಿವರಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್, ನವಾಬ್ ಸಿರಾಜುದ್ದೌಲ, ಮೌಲಾನ ಶೌಕತ್ಕಲಿ ಜೌಹರ್, ಮೌಲಾನಾ ಮುಹಮ್ಮದಲೀ ಜೌಹರ್, ಹಝ್ರತ್ ಮಾಲಾನಾ ಅತಾವುಲ್ಲಾ ಷಾ ಬುಖಾರಿ, ಅಲ್ಲಾಮಾ ಫಸಲ್ ಹಖ್ ಖೈರಾಬಾದಿ ಮೊದಲಾದ ಹೋರಾಟಗಾರರನ್ನು ಸ್ಮರಿಸಿದರು.

ಸಮಾರಂಭವನ್ನು ಕೆಸಿಎಫ್ ದುಬೈ ನಾಯಕರಾದ ಉಬೈದುಲ್ಲಾ ಸಖಾಫಿ ಉಧ್ಘಾಟಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಹಕೀಂ ಮದನಿ ಕಡಬ, ಝೋನ್ ಉಪಾಧ್ಯಕ್ಷರಾದ ಯೂಸುಫ್ ಸಖಾಪಿ ಬೆಳಂದೂರು ಸಹಿತ ಹಲವಾರ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಝೋನ್ ಪ್ರ,ಕಾರ್ಯದರ್ಶಿ ಅಬ್ದುನ್ನಾಸರ್ ಸಅದಿ ಪನ್ಯ ಸ್ವಾಗತಿಸಿ ಕೋಶಾಧಿಕಾರಿ ರಫೀಕ್ ಅಲೆಕ್ಕಾಡ್ ವಂದಿಸಿದರು.

error: Content is protected !! Not allowed copy content from janadhvani.com