janadhvani

Kannada Online News Paper

ದಾರುಲ್ ಅಶ್-ಅರಿಯ ಸಿಲ್ವರ್ ಜುಬ್ಲಿ ಸಮ್ಮೇಳನಕ್ಕೆ ಶಾರ್ಜಾ ಸಮಿತಿಯಿಂದ ಬೃಹತ್ ಪ್ರಚಾರ ಸಭೆ

ಶಾರ್ಜಾ : ದಾರುಲ್ ಅಶ್ ಅರಿಯ ಎಜುಕೇಶನ್ ಸೆಂಟರ್ ಸುರಿಬೈಲ್ ನಲ್ಲಿ ನವೆಂಬರ್ 1, 2, 3 ರಂದು ನಡೆಯಲಿರುವ ಸಿಲ್ವರ್ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ ಅಶ್ ಅರಿಯಾ ಶಾರ್ಜಾ ಸಮಿತಿ ವತಿಯಿಂದ ಬೃಹತ್ ಪ್ರಚಾರ ಸಭೆ ದಿನಾಂಕ 09/09/2023 ಶನಿವಾರ ರಾತ್ರಿ 7:30 ಕ್ಕೆ ಸರಿಯಾಗಿ ರೋಲಾ ಕ್ಲೋಕ್ ಟವರ್ ಹತ್ತಿರ ಇರುವ ನೂರ್ ಹಿಲಾಲ್ ಪಾರ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿ ನಿರ್ದೇಶಕರಾದ ಸೈಯ್ಯದ್ ಸಹದ್ ತಂಙಳ್ ಆದೂರು ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಪ್ರಚಾರದ ಸಲುವಾಗಿ ದಾರುಲ್ ಅಶ್ ಅರಿಯ ಸುರಿಬೈಲ್ ಸಂಸ್ಥೆಯ ಅಧ್ಯಕ್ಷರೂ, ಸೂಫೀ ವರ್ಯರು ದಕ್ಷಿಣ ಭಾರತದ ಮಹಾ ವಿದ್ವಾಂಸರೂ ಆದ ಶೈಖುನಾ ಮಹ್‌ಮೂದ್ ಪೈಝಿ ವಾಲೆಮಂಡೋವ್, ಹಾಗೂ ಸಂಸ್ಥೆಯ ಜನರಲ್ ಮ್ಯಾನೇಜರ್, ಮುಹಮ್ಮದ್ ಅಲಿ ಸಖಾಫಿಯವರು ಆಗಮಿಸಲಿದ್ದು ಆಶ್ ಅರಿಯ ಸಮ್ಮೇಳದ ಪ್ರಚಾರಕ್ಕೆ ಶಾರ್ಜಾ ನಗರ ಸಾಕ್ಷಿಯಾಗಲಿದೆ.

ಹಲವಾರು ಉಲಮಾ ಉಮರಾಗಳು ಭಾಗವಹಿಸುವ ಕಾರ್ಯಕ್ರಮದ ಸೊಬಗನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ‌ ರೀತಿಯ ಜನ ಸೇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸೈಯ್ಯದ್ ಸಹದ್ ತಂಂಳ್ ತಿಳಿಸಿದರು.
ಈ ಸಂಧರ್ಭದಲ್ಲಿ ಸುರಿಬೈಲ್ ಉಸ್ತಾದರ ಪುತ್ರ ಅಬ್ಧುಲ್ ರಶೀದ್ ಹನೀಫಿ, ಸ್ವಾಗತ ಸಮಿತಿ ಚೇರ್ಮಾನ್ ಅಬ್ಧುಲ್ ಖಾದರ್ ಹಾಜಿ, ಕನ್ವಿನರ್ ಶಮೀರ್ ಪಾಣೂರು, ಕೋಶಾಧಿಕಾರಿ ಅಬೂ ಸ್ವಾಲಿಹ್ ಸಖಾಫಿ, ಅಶ್ ಅರಿಯಾ ಶಾರ್ಜಾ ಸಮಿತಿ ಚೇರ್ಮನ್ ಅಶ್ರಫ್ ಸತ್ತಿಕಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಾಲೆತ್ತೂರು, ಅಬ್ಧುಲ್ ಜಬ್ಬಾರ್ ಹಾಜಿ, ಅನ್ಸಾರ್ ಸಾಲೆತ್ತೂರು, ಅಶ್ರಫ್ ಮುನ್ನೂರು ಹಾಗೂ ಇಕ್ಬಾಲ್ ಕೈರಂಗಳ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com