janadhvani

Kannada Online News Paper

SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಹಿಜಾಮ ಮತ್ತು ಯುನಾನಿ ವೈದ್ಯಕೀಯ ಶಿಭಿರ

ಬೆಂಗಳೂರು : ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನದ ಪ್ರಚಾರಾರ್ಥ ಎಸ್ ವೈ ಎಸ್ ಜಯನಗರ ಝೋನ್ ವತಿಯಿಂದ ಹಿಜಾಮ ಮತ್ತು ಯುನಾನಿ ವೈದ್ಯಕೀಯ ಶಿಬಿರ 13 ಆಗಸ್ಟ್ 2013 ರಂದು ಸ’ಅದಿಯ ಎಜುಕೇಶನ್ ಫೌಂಡೇಶನ್ ಯಾರಬ್‌ನಗರ ದಲ್ಲಿ ನಡೆಯಿತು.

ಎಸ್ ವೈ ಎಸ್ ಝೋನ್ ಅಧ್ಯಕ್ಷರಾದ ಸಂಶುದ್ದೀನ್ ಅಝ್ಹರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭ ವನ್ನು ರಾಜ್ಯ ಉಪಾಧ್ಯಕ್ಷರಾದಂತಹ ಬಷೀರ್ ಸ’ಅದಿ ಪೀಣ್ಯ ರವರು ಉದ್ಘಾಟಿಸಿದರು. ನುರಿತ ವೈದ್ಯರ ನೇತೃತ್ವ ದಲ್ಲಿ ನಡೆದ ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಸಂಜೆ ನಡೆದ ಶಿಭಿರದ ಸಮಾರೋಪ ಸಮಾರಂಭ ದಲ್ಲಿ ರಾಜ್ಯ ವಖ್ಫ್ ಚೇರ್ಮನ್ ಶಾಫಿ
ಸಅದಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು.
ಶಿಬಿರದಲ್ಲಿ ಎಸ್ ಎಸ್ ಜಿಲ್ಲಾಧ್ಯಕ್ಷ ಲತೀಫ್ ನಈಮಿ, ಎಸ್ ವೈ ಎಸ್ ನಾಯಕರಾದ ಇಸ್ಮಾಯಿಲ್ ಸಅದಿ ಕಿನ್ಯ, ಶಿಹಾಬ್ ಮಡಿವಾಳ, ಬಷೀರ್ ಸಅದಿ ಕರಾಯ,ವಾಜಿದ್ ಅಂಜದಿ ಭಾಗವಹಿಸಿದ್ದರು.