ಉಡುಪಿ : SSF ಗೋಲ್ಡನ್ ಫಿಫ್ಟಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ತಾಜುಲ್ ಉಲಮಾ ರಿಲೀಫ್ ಸೆಲ್ ನಿಂದ, SSF ಉಡುಪಿ ಡಿವಿಷನ್ ಮತ್ತು ಹ್ಯುಮಾನಿಟಿ ಸರ್ವಿಸ್ ಡಿಫೆನ್ಸ್ ಪೋರ್ಸ್ ಉಡುಪಿ ಇವರ ಸಹಭಾಗಿತ್ವದಲ್ಲಿ, ಉಡುಪಿ ಮಿಷನ್ ಕಂಪೌಡ್ ಬಳಿ ಇರುವ ಬುದ್ದಿಮಾಂದ್ಯ ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಿಲೀಫ್ ಸೆಲ್ ಚೇರ್ಮೆನ್ ರಝಾಕ್ ಉಸ್ತಾದ್ ಅಂಬಾಗಿಲು ಇವರ ಅಧ್ಯಕ್ಷತೆಯಲ್ಲಿ, ರಿಲೀಫ್ ಸೆಲ್ ಉಪಾಧ್ಯಕ್ಷರಾದ ರಶೀದ್ ಉಸ್ತಾದ್ ಕಟಪಾಡಿ ದುವಾಗೈದರು. ರಿಲೀಫ್ ಸೆಲ್ ಕನ್ವೀನರ್ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ SSF ಉಡುಪಿ ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಪಾಲಿಲಿ ಮಣಿಪುರ, ಕಾರ್ಯದರ್ಶಿ ಸಿದ್ದೀಕ್ ಅಂಬಾಗಿಲು, ಕೋಶಾಧಿಕಾರಿ ಇಮ್ತಿಯಾಝ್ ಸಂತೋಷ್ ನಗರ, HSDF ಇದರ ಅಧ್ಯಕ್ಷ ಮಜೀದ್ ಕಟಪಾಡಿ, ಉಪಾಧ್ಯಕ್ಷ ರಿಝ್ವಾನ್ ಕೃಷ್ಣಾಪುರ, ರಿಲೀಪ್ ಸೆಲ್ ಕೋಶಾಧಿಕಾರಿ ಸುಲೈಮಾನ್ ರಂಗಬಕೆರೆ ಸಹಿತ ವಿರುವ ಇನ್ನಿತರ ನಾಯಕರು ಸದಸ್ಯರು ಉಪಸ್ಥಿತಿ ಇದ್ದರು.