janadhvani

Kannada Online News Paper

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಪಾಲನೆಯಾಗಲಿ- ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ

ಸೌಜನ್ಯ ಪ್ರಕರಣದಲ್ಲಿ ರಾಜ್ಯದ ಜನತೆಯು ನ್ಯಾಯದ ನಿರೀಕ್ಷೆಯಲ್ಲಿದೆ.

ಮಂಗಳೂರು: ಉಜಿರೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮೃತ ಸೌಜನ್ಯ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಪಾಲನೆ ಆಗಲಿ ಮತ್ತು ನೈಜ ದುಷ್ಕರ್ಮಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

ಉಜಿರೆಯ ವಿದ್ಯಾರ್ಥಿನಿ ಮೃತ ಸೌಜನ್ಯಳನ್ನು ಅತ್ಯಾಚಾರ ನಡೆಸಿ ಹತ್ಯೆಗೊಳಿಸಿದ ಅಂದಿನ ಪ್ರಕರಣದಲ್ಲಿ ಸಂತೋಷ್ ಎಂಬ ಆರೋಪಿ ದೋಷ ಮುಕ್ತನಾಗಿದ್ದು, ನೈಜ ಅಪರಾಧಿಗಳು ಯಾರೆಂದು ಬಹಿರಂಗ ಪಡಿಸುವುದು ವ್ಯವಸ್ಥೆಯ ಮುಂದಿನ ಸವಾಲು ಆಗಿರುವುದರಿಂದ ಸೌಜನ್ಯ ಪ್ರಕರಣದಲ್ಲಿ ರಾಜ್ಯದ ಜನತೆಯು ನ್ಯಾಯದ ನಿರೀಕ್ಷೆಯಲ್ಲಿದೆ.

ಮೃತ ಸೌಜನ್ಯಳ ಸಾವು ಯಾವುದೇ ಕಾರಣಕ್ಕೂ ನಿಗೂಢವಾಗಿ ಉಳಿಯ ಕೂಡದು ಮತ್ತು ನೈಜ ಆರೋಪಿಗಳು ತಪ್ಪಿಸಿ ಕೊಳ್ಳಕೂಡದು. ಸೌಜನ್ಯ ನ್ಯಾಯದ ಪರ ಹೋರಾಟಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸುತ್ತದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.