janadhvani

Kannada Online News Paper

ಆಪದ್ಬಾಂಧವ ಆಶ್ರಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಪಡುಬಿದ್ರೆ: ಮುದರಂಗಡಿ ಸಮೀಪದ ಮೈಮುನ ಫೌಂಡೇಶನ್ ವತಿಯಿಂದ ಆಪದ್ಬಾಂಧವ ಆಶ್ರಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಪದ್ಬಾಂಧವ ಆಸಿಫ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಆಶ್ರಮದ ವಿಶೇಷ ಅತಿಥಿ ಮೂಸಬ್ಬ ಇವರು ಮಹಾತ್ಮ ಗಾಂಧೀಜಿಯವರ ವೇಷಭೂಷಣ ಧರಿಸಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮುದರಂಗಡಿ ಪೇಟೆಯತ್ತ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಕಾರ್ಯಕ್ರಮವನ್ನು ನಿರೂಪಿಸಿ, ಮುನೀರ್ ಮಲ್ಲೂರು ವಂದಿಸಿದರು.

ವರದಿ: ಅದ್ದಿ ಬೊಳ್ಳೂರು