janadhvani

Kannada Online News Paper

ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿ, ಖುವತ್ತುಲ್ ಇಸ್ಲಾಂ ಮದರಸ- 77ನೇ ಸ್ವಾತಂತ್ರೋತ್ಸ ದಿನಾಚರಣೆ

ವಿಟ್ಲ: ಇಲ್ಲಿನ ಬೋಳಂತೂರು ರಹ್ಮಾನಿಯಾ ಜುಮಾ ಮಸೀದಿ ಮತ್ತು ಖುವತ್ತುಲ್ ಇಸ್ಲಾಂ ಮದರಸ ಕಮಿಟಿ ಬೋಳಂತೂರು ಇದರ
77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ 7.30ಕೆ ಖುವತುಲ್ ಇಸ್ಲಾಂ ಮದರಸ ಮುಂಭಾಗದಲ್ಲಿ ನಡೆಯಿತು.

ಧ್ವಜಾರೋಹಣ ನೇತೃತ್ವವನ್ನು ಜಮಾಅತಿನ ಅಧ್ಯಕ್ಷರಾದ ಇಬ್ರಾಹಿಂ ಮಜಲ್ ಕೊಡಿ ನೆರವೇರಿಸಿದರು. ಖತೀಬ್ ಉಸ್ತಾದ್ ಸುಲೈಮಾನ್ ಸಖಾಫಿ ದುಆಕೆ ನೇತೃತ್ವ ನೀಡಿದರು. ಎಸ್ ಬಿ ಎಸ್. ಮಕ್ಕಳು ರಾಷ್ಟ್ರಗೀತೆ ಹಾಡಿದರು.
ಪ್ರಸ್ತಾವಿಕ ಭಾಷಣದಲ್ಲಿ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಮದನಿಯವರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕೆಂದು ಕರೆ ನೀಡಿದರು.

ಮುಸ್ತಫಾ ಹನೀಫಿ ಉಸ್ತಾದ್,ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡಿದಬಳಿ,ಕೋಶಾಧಿಕಾರಿ ಅಬ್ದುಲ್ ಚ ದಂಡೆಮಾರ್ ಹಾಗೂ ಮದರಸ ಉಸ್ತುವಾರಿಗಳು ಕುಂಞಮೋನು ಮಜಲ್ ಕೊಡಿ, ಬಿ ಕೆ ಅಬ್ದುಲ್ ಹಮೀದ್ ಹಿದಾಯತ್ ಹಾಗೂ ಮದರಸ ಮಕ್ಕಳು ಪೋಷಕರು ಜಮಾಅತಿನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.

ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಿ, ಮದರಸ ಅಧ್ಯಾಪಕರಾದ ತನ್ವೀರ್ ಹಿಮಮಿ ಸಖಾಫಿ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com