janadhvani

Kannada Online News Paper

ಕನ್ಯಾಡಿ ಮಸೀದಿ ವಠಾರದಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ

ಸ್ವತಂತ್ರ ಭಾರತದ 76 ನೇ ದಿನಾಚರಣೆಯು ಕನ್ಯಾಡಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಜನಾಬ್ ಸಿದ್ದೀಖ್ ಅಜಿಕುರಿ ಯವರು ವಹಿಸಿ ಧ್ವಜಾರೋಹಣ ನೆರವೇರಿಸಿದರು.
ದುಆ ಮತ್ತು ಸಂದೇಶ ಭಾಷಣವನ್ನು ಸ್ಥಳೀಯ ಖತೀಬ್ ಬಹು ಇಬ್ರಾಹಿಂ ಸಖಾಫಿ ಕಬಕ ನಡೆಸಿದರು.

ಅತೀ ವಿಜೃಂಭಣೆಯಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕ್ರಮದಲ್ಲಿ ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್ ಬರಮೇಲು ನಿವೃತ್ತ ಚಾಲಕರಾದ ಆದಂ ಅಜಿಕುರಿ ಅಬ್ದುಲ್ ಖಾದರ್ ದರ್ಖಾಸ್ ಕರ್ನಾಟಕ ಮುಸ್ಲಿಂ ಜಮಾಅತ್ ಕನ್ಯಾಡಿ ಕಾರ್ಯದರ್ಶಿ ಪುತ್ತುಮೋನಾಕ ದೊಂಡಲೆ SYS ಅಧ್ಯಕ್ಷರಾದ ಸಲೀಂ ಕನ್ಯಾಡಿ SYS ಕೋಶಾಧಿಕಾರಿ ಲುಕ್ಮಾನ್ ಅಜಿಕುರಿ, SYSಉಪಾಧ್ಯಕ್ಷರಾದ ಸಿದ್ದೀಖ್ ದೊಂಡಲೆ ಸ್ವಲಾತ್ ಕಮಿಟಿ ಅಧ್ಯಕ್ಷರಾದ ಹನೀಫ್ ಕನ್ಯಾಡಿ SSF ಕನ್ಯಾಡಿ ಕೋಶಾಧಿಕಾರಿ ಸಫ್ವಾನ್ ಅಜಿಕುರಿ ಕ್ಯಾಂಪಸ್ ಕಾರ್ಯದರ್ಶಿ ತೌಫೀಖ್ ಕನ್ಯಾಡಿ ಸ್ವಾದಿಖ್ ಅಜಿಕುರಿ ಗಲ್ಫ್ ಪ್ರತಿನಿಧಿ ಖಲಂದರ್ ಅಜಿಕುರಿ ಹಾಗೂ ಹಲವಾರು ಜಮಾಅತ್ ಪ್ರತಿನಿಧಿಗಳು ಯುವಕರು ವಿಧ್ಯಾರ್ಥಿ ವಿಧ್ಯಾರ್ಥಿನಿಗಳು ಭಾಗವಹಿಸಿದ್ದರು
ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರ ಗೀತೆ ಹಾಡಿ ಸಿಹಿತಿಂಡಿ ವಿತರಿಸಲಾಯಿತು.

error: Content is protected !! Not allowed copy content from janadhvani.com