janadhvani

Kannada Online News Paper

ವಿಟ್ಲ ದಾರುನ್ನಜಾತ್ ವಿದ್ಯಾಸಂಸ್ಥೆಯಲ್ಲಿ 77 ನೇ ಸ್ವಾತಂತ್ರೋತ್ಸವ

ವಿಟ್ಲ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಇದರ ವತಿಯಿಂದ 77ನೇ ಸ್ವತಂತ್ರೋತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಹ್ಮಮುದುಲ್ ಫೈಝಿ ಅಧ್ಯಕ್ಷತೆ ವಹಿಸಿದರು.

ದಾರುನ್ನಜಾತ್ ಮುದರ್ರಿಸ್ ಸಯ್ಯದ್ ಸಮೀಮ್ ತಂಙಳ್ ಧ್ವಜಾರೋಹಣ ನಡೆಸಿದರು ಸಂಸ್ಥೆ ಮ್ಯಾನೇಜರ್ ಹಾಜಿ ಹಮೀದ್ ಕೋಡಂಗಾಯಿ ಮಾತನಾಡಿ ಭವ್ಯವಾದ ಭಾರತದ ಪರಂಪರೆಯನ್ನು ಉಳಿಸುವುದರ ಮೂಲಕ ಈ ದೇಶಕ್ಕಾಗಿ ಹುತಾತ್ಮರಾದ ನಾಯಕರನ್ನು ಸ್ಮರಿಸುವುದುರ ಮೂಲಕ ಶಾಂತಿ ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ದಾರುನ್ನಜಾತ್ ವಿದ್ಯಾರ್ಥಿಗಳಿಂದ ರಾಷ್ಟ್ರ ಗೀತೆ ಮತ್ತು ಭಾರತ ದೇಶದ ಸ್ವಾತಂತ್ರಕ್ಕಾಗಿ ಹುತಾತ್ಮರಾದ ನಾಯಕರ ಸ್ಮರಣ ಹಾಡನ್ನು ಹಾಡಿದರು ಸಂಸ್ಥೆಯ ಕೋಶಾಧಿಕಾರಿ ಡಾ ಹಸೈನಾರ್,ಹಾಫಿಳ್ ಶರೀಫ್ ಮುಸ್ಲಿಯಾರ್ ,ಇಬ್ರಾಹಿಂ ಮುಸ್ಲಿಯಾರ್ ದುಬೈ,ಉಸ್ಮಾನ್ ಹಾಜಿ,ಅಂಝ ಟಿಪ್ಪು ನಗರ,ಅಬ್ಬಾಸ್ ಟಿಪ್ಪು ನಗರ
ಹಾಗೂ ದರ್ಸ್ ವಿದ್ಯಾರ್ಥಿಗಳು, ಮದ್ರಸ ವಿದ್ಯಾರ್ಥಿಗಳು,ಊರಿನ ಮಹನೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಸಂಸ್ಥೆಯ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮದ್ರಸ ಅದ್ಯಪಕರಾದ ರಝಾಕ್ ಸಹದಿ ಸ್ವಾಗತಿಸಿದರು.

error: Content is protected !! Not allowed copy content from janadhvani.com