janadhvani

Kannada Online News Paper

ಕೆ.ಸಿ.ಎಫ್. ಖತ್ತರ್ – ವಾರ್ಷಿಕ ಕೌನ್ಸಿಲ್ 2K23

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ದಿನಾಂಕ 03-08-2023 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ದೋಹಾದಲ್ಲಿ ನಡೆಯಿತು.

ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿ‌ ಅಧ್ಯಕ್ಷರಾದ ಹನೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವು ಐಸಿಎಫ್ ಖತ್ತರ್ ರಾಷ್ಟ್ರೀಯ ನಾಯಕರಾದ ಬಶೀರ್ ಪುತ್ತುಪಾಡುರವರಿಂದ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘಟನೆಯ ಮಹತ್ವ ಹಾಗೂ ನಮಗೆ ಸಂಘಟನೆಯ ಅಗತ್ಯತೆಯ ಕುರಿತಾಗಿ ಸಂಕ್ಷಿಪ್ತವಾಗಿ ವಿವರಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಅಧ್ಯಕ್ಷರಾದ ಸತ್ತಾರ್ ಅಶ್ರಫಿ ಮಠರವರಿಂದ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ನಮ್ಮ ಜೀವನದಲ್ಲಿ ಅಳವಡಿಸಬೇಕಾದ ಕೆಲವೊಂದು ಸುಸೂತ್ರಗಳ‌ ಬಗ್ಗೆ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ 2022-23 ನೇ ಸಾಲಿನ ವಾರ್ಷಿಕ ವರದಿ ಹಾಗೂ ರಾಷ್ಟ್ರೀಯ ಸಮಿತಿ ಫೈನಾನ್ಸ್ ಕಂಟ್ರೋಲರ್ ಮುನೀರ್ ಹಾಜಿ ಮಾಗುಂಡಿ 2022-23 ನೇ‌ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ತದನಂತರ ಎಲ್ಲಾ ವಿಭಾಗಗಳ ಕಾರ್ಯದರ್ಶಿಗಳಿಂದ ಆಯಾಯ ವಿಭಾಗದ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡನೆಗೊಂಡಿತು.

ವೇದಿಕೆಯಲ್ಲಿ ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಅಧ್ಯಕ್ಷರಾದ ಹಾಜಿ ಕಬೀರ್ ದೇರಳಕಟ್ಟೆ, ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರು ಹಾಗೂ ವಾರ್ಷಿಕ ಕೌನ್ಸಿಲ್ ಚುಣಾವಣಾಧಿಕಾರಿ ಹಾಫಿಳ್ ಉಮರುಲ್ ಫಾರುಖ್ ಸಖಾಫಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಕಾರ್ಯದರ್ಶಿ ಹಕೀಂ ಪಾತೂರುರವರು, ಕೆಸಿಎಫ್ ನ ದಶಮಾನೋತ್ಸವದ ಅಂಗವಾಗಿ ಅಂತರಾಷ್ಟ್ರೀಯ ಸಮಿತಿ ಹಮ್ಮಿಕೊಂಡತಹ ಹಲವಾರು ಪದ್ದತಿಗಳನ್ನು ಸಭಿಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು.

ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ಶಿಕ್ಷಣ ವಿಭಾಗದ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಹಂಡುಗುಳಿ ವಂದಿಸಿದರು.

ಸಂಘಟನೆಯ ಕಾರ್ಯಾಚರಣೆ ಹಾಗೂ ಆಯಾಯ ವಿಭಾಗಗಳ ಪದಾಧಿಕಾರಿಗಳ ಅವಲೋಕನ ನಡೆಸಿ,18ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಸಮಿತಿಯನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ಅಂಗೀಕರಿಸಲಾಯಿತು.

2023-24 ನೇ ಸಾಲಿನ ಪದಾಧಿಕಾರಿಗಳ ವಿವರ:
ಅಧ್ಯಕ್ಷರು : ಮುಹಮ್ಮದ್ ಹನೀಫ್ ಪಾತೂರು
ಪ್ರಧಾನ ಕಾರ್ಯದರ್ಶಿ : ಉಮರ್ ಫಾರೂಖ್ ಕೃಷ್ಣಾಪುರ
ಫೈನ್ಸಾನ್ ಕಂಟ್ರೋಲರ್ : ಮುನೀರ್ ಹಾಜಿ‌ ಮಾಗುಂಡಿ

ಸಂಘಟನಾ ವಿಭಾಗ :
ಅಧ್ಯಕ್ಷರು : ಮಿರ್ಶಾದ್ ಕನ್ಯಾನ
ಕಾರ್ಯದರ್ಶಿ : ರಿಶದ್ ಮಧುವನ

ಶಿಕ್ಷಣ ವಿಭಾಗ :
ಅಧ್ಯಕ್ಷರು : ಖಾಲಿದ್ ಹಿಮಮಿ ಬೋಳಂತೂರು
ಕಾರ್ಯದರ್ಶಿ : ಅಬೂಬಕ್ಕರ್ ಸಿದ್ದೀಖ್ ಹಂಡುಗುಳಿ
ಕೋಆರ್ಡಿನೇಟರ್ : ಸಲೀಂ ಉಳ್ಳಾಲ

ಇಹ್ಸಾನ್ ವಿಭಾಗ :
ಅಧ್ಯಕ್ಷರು : ಅಶ್ರಫ್ ವಳಚ್ಚಿಲ್
ಕಾರ್ಯದರ್ಶಿ : ಅಶ್ರಫ್ ಕಾವಳ್’ಕಟ್ಟೆ
ಕೋಆರ್ಡಿನೇಟರ್ : ಉಮರ್ ಫಾರೂಖ್ ಜೆಪ್ಪು

ಆಡಳಿತ ಹಾಗೂ ಕಛೇರಿ ವಿಭಾಗ :
ಅಧ್ಯಕ್ಷರು : ಸತ್ತಾರ್ ಅಶ್ರಫಿ ಮಠ
ಕಾರ್ಯದರ್ಶಿ : ಅಬ್ದುಲ್ ಹಕೀಂ ‌ಪಾತೂರು

ಪ್ರಕಾಶನ ವಿಭಾಗ :
ಅಧ್ಯಕ್ಷರು : ಯಹ್ಯಾ‌ ಸ’ಅದಿ ಕೊಡಗು
ಕಾರ್ಯದರ್ಶಿ : ಹಸೈನಾರ್ ಕಾಟಿಪಳ್ಳ

ಸಾಂತ್ವನ ವಿಭಾಗ :
ಅಧ್ಯಕ್ಷರು : ಇಕ್ಬಾಲ್ ಪೂಂಜಾಲ್ ಕಟ್ಟೆ
ಕಾರ್ಯದರ್ಶಿ : ಸಿದ್ದೀಖ್ ಕೃಷ್ಣಾಪುರ
ಕೋಆರ್ಡಿನೇಟರ್ : ಮುಸ್ತಫಾ ಕೃಷ್ಣಾಪುರ.

error: Content is protected !! Not allowed copy content from janadhvani.com