ಮಂಗಳೂರು; ಇತ್ತೀಚಿಗೆ ಮಿತಿ ಮೀರಿದ ಡ್ರಗ್ಸ್ ಮಾರಾಟ ಮತ್ತು ಸೇವನೆಯಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ರೋಶದ ಅಲೆಯೆದ್ದಿದೆ. ಕುದ್ರೋಳಿಯಲ್ಲಿ ಐದು ಮಸೀದಿ ಆಡಳಿತ ಮಂಡಳಿ,ಸಂಘ ಸಂಸ್ಥೆಗಳ ಪ್ರತಿನಿಧಿಯನ್ನೊಳಗೊಂಡ ಮುಸ್ಲಿಂ ಐಕ್ಯತಾ ವೇದಿಕೆ ಯು ಕಳೆದ ಒಂದು ತಿಂಗಳಿನಿಂದ
ಡ್ರಗ್ಸ್ ಮುಕ್ತ ಕುದ್ರೋಳಿ, ಯುವ ಪೀಳಿಗೆಯ ರಕ್ಷಣೆಯೇ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಳೆದ ವಾರದಲ್ಲಿ ಐದು ಮಸೀದಿಯ ವ್ಯಾಪ್ತಿಯ ಸುಮಾರು 2000 ಸಾವಿರದಷ್ಟು ಮನೆ ಮನೆಗೆ ನಾಯಕರು ನಾಗರಿಕರ ಸಹಕಾರದೊಂದಿಗೆ ತೆರಳಿ ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸಲಾಗಿದೆ.
ಇದೀಗ ಆಗಷ್ಟ್ 8 ರಂದು ಸಾಯಂಕಾಲ 5.00 ಕ್ಕೆ ಸರಿಯಾಗಿ ಜಾಮಿಅ ಮಸೀದಿ ಕುದ್ರೋಳಿ ಯಿಂದ ಕಂಡತ್ ಪಳ್ಳಿ ಜುಮಾ ಮಸೀದಿಯವರೆಗೆ ಬೃಹತ್ ಜನಜಾಗೃತಿ ರ‌್ಯಾಲಿ ನಡೆಯಲಿದೆ.
ಬೃಹತ್ ಜನಜಾಗೃತಿ ಸಮಾವೇಶ ದಿನಾಂಕ : 09-08-2023 ಬುಧವಾರ ರಾತ್ರಿ 7.15 ಕ್ಕೆ ಉರ್ದು ಶಾಲೆ ಕುದ್ರೋಳಿ ಜಂಕ್ಷನ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರ
ಅಧ್ಯಕ್ಷ ತೆ: ಅಲ್ ಹಾಜ್ ಕೆ ಎಸ್ ಮುಹಮ್ಮದ್ ಮಸೂದ್
(ಅಧ್ಯಕ್ಷ ರು ದಿ ಸೆಂಟ್ರಲ್ ಕಮಿಟಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ)
ಸಂಪನ್ಮೂಲ ವ್ಯಕ್ತಿಗಳು
ಶ್ರೀ ಕುಲದೀಪ್ ಕುಮಾರ್ ಆರ್ ಜೈನ್ IPS
ಪೋಲೀಸ್ ಕಮಿಷನರ್ ಮಂಗಳೂರು
ಜನಾಬ್ ರಫೀಕ್ ಮಾಸ್ಟರ್
ಮೊಟಿವೇಷನಲ್ ಸ್ಪೀಕರ್ ಮಂಗಳೂರು
ಶ್ರೀ ನಾರಾಯಣ ಕರ್ಕೇರ ಕಾರ್ಯದರ್ಶಿ ವಿಠೋಭ ಭಜನಾ ಮಂದಿರ
ಶ್ರೀ ಅಶೋಕ್ ಕುಮಾರ್
ಅಧ್ಯಕ್ಷ ರು ಕುದ್ರೋಳಿ ಯುವಕ ಸಂಘ
ವೇದಿಕೆ ಯಲ್ಲಿ
ಜನಾಬ್ ಯಾಸೀನ್ ಕುದ್ರೋಳಿ ಅಧ್ಯಕ್ಷರು,
ಜನಾಬ್ ಕೆ ಅಶ್ರಫ್ ಮಾಜಿ ಮೇಯರ್,
ಜನಾಬ್ ಹಾಜಿ ಅಬೂಬಕ್ಕರ್ ಪ್ರಧಾನ ಕಾರ್ಯದರ್ಶಿ,
ಜನಾಬ್ ಶಂಸುದ್ದೀನ್ ಎಚ್ ಬಿಟಿ ಕಾರ್ಪೋರೇಟರ್ , ಜನಾಬ್ ಮಕ್ಬೂಲ್ ಜಾಮಿಅ ಕೋಶಾಧಿಕಾರಿ ,
ಜನಾಬ್ ಅಬ್ದುಲ್ ಅಝೀಝ್ ಸಂಚಾಲಕರು,
ಜನಾಬ್ ಪಝಲ್ ಮುಹಮ್ಮದ್ ಅಧ್ಯಕ್ಷರು ನಡುಪಳ್ಳಿ ,
ಜನಾಬ್ ಅಬ್ದುಲ್ ಅಝೀಝ್ ಎಚ್ ಬಿಟಿ ಅಧ್ಯಕ್ಷ ರು ಮೊಹ್ದಿನ್ ಪಳ್ಳಿ ,
ಜನಾಬ್ ನಾಸಿರ್ ಐಕೋ ಅಧ್ಯಕ್ಷರು ಸಲಫಿ ಮಸ್ಜಿದ್,
ಜನಾಬ್ ಶಮೀಮ್ ಅಧ್ಯಕ್ಷರು ಕಂಡತ್ ಪಳ್ಳಿ ಉಪಸ್ಥಿತಿಯಲ್ಲಿ
ಈ ಕಾರ್ಯಕ್ರಮದಲ್ಲಿ ಊರಿನ ಪ್ರತಿಯೊಬ್ಬ ನಾಗರಿಕರಿಗೂ ಡ್ರಗ್ಸ್ ಬಗ್ಗೆ ಆಗುವ ಅನಾಹುತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ . ತಮ್ಮ ಮಕ್ಕಳ ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ.ಎಂದು ಮುಸ್ಲಿಂ ಐಕ್ಯತಾ ವೇದಿಕೆ ಪತ್ರಿಕಾ ಹೇಳಿಕೆ ನೀಡಿದೆ.