ಶಿರ್ವ: ಎಸ್ಸೆಸ್ಸೆಫ್ ಐವತ್ತರ ಸಂವತ್ಸರ ಪ್ರಯುಕ್ತ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸೆಪ್ಟೆಂಬರ್ 10 ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಗೋಲ್ಡನ್ ಫಿಫ್ಟಿ ಸಮ್ಮೇಳನ ನಡೆಯಲಿದೆ.
ಇದರ ಪ್ರಚಾರದ ಅಂಗವಾಗಿ ಆಗಸ್ಟ್ 06 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಎಸ್ಸೆಸ್ಸೆಫ್ ಶಿರ್ವ ಸೆಕ್ಟರ್ ವತಿಯಿಂದ ರೈನ್’ಬೋ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ಸೈಂಟ್ ಮೇರಿಸ್ ವೃತ್ತದಿಂದ ಹೊರಟು ಶಿರ್ವ ಪೇಟೆಯಲ್ಲಿ ಸಮಾಫ್ತಿಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಸಖಾಫಿ, ಸುನ್ನೀ ಅಧ್ಯಾಪಕ ಒಕ್ಕೂಟ ಕಾಪು ರೇಂಜ್ ಅಧ್ಯಕ್ಷರಾದ ಅಬ್ದುರ್ರಝಾಖ್ ಖಾಸಿಮಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ರಕೀಬ್, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಪಡುಬಿದ್ರಿ, ಶಿರ್ವ ಜಾಮಿಯ ಮಸ್ಜಿದ್ ಖತೀಬರಾದ ಸಿರಾಜುದ್ದೀನ್ ಝೈನಿ, ಶಿರ್ವ ಮಸ್ಜಿದ್ ಅಧ್ಯಕ್ಷರಾದ ಜುಬೇರ್ ಅಲಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ವಿಸ್ಡಮ್ ಕಾರ್ಯದರ್ಶಿ ಅನ್ಫಾಲ್ ಉಚ್ಚಿಲ, ಶಿರ್ವ ಸೆಕ್ಟರ್ ಅಧ್ಯಕ್ಷರಾದ ತೌಫೀಕ್ ಪಕೀರ್ಣಕಟ್ಟೆ ಹಾಗೂ ಸೆಕ್ಟರ್ ವ್ಯಾಪ್ತಿಯ ರೈನ್’ಬೋ ವಿದ್ಯಾರ್ಥಿಗಳು, ಸೆಕ್ಟರ್ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಎಂದು ಶಿರ್ವ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಝೀಯಾನ್ ಹಾಗೂ ರೈನ್’ಬೋ ಕಾರ್ಯದರ್ಶಿ ಸಫ್ವಾನ್ ಪಯ್ಯಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ