janadhvani

Kannada Online News Paper

ಜಗತ್ತು ಉಸಿರು ಬಿಗಿ ಹಿಡಿದು ನೋಡಿತು, ಜಾನ್ ರೂಸ್ ‘ಕೂಲ್’ ಆಗಿ ನಡೆದರು- ಲಾಂಗೆಸ್ಟ್ ಎಲ್ಇಡಿ ಸ್ಲಾಕ್‌ಲೈನ್‌ನಲ್ಲಿ ‘ರೆಕಾರ್ಡ್ ವಾಕ್’

185 ಮೀಟರ್ ಎತ್ತರದಲ್ಲಿ, ಕಟ್ಟಡದ ಎರಡು ತುದಿಗಳನ್ನು ಸಂಪರ್ಕಿಸುವ ಹಗ್ಗದ ಉದ್ದಕ್ಕೂ ಜಾನ್ 150 ಮೀಟರ್ ನಡೆದರು.

ದೋಹಾ: ಕತಾರ್‌ನ ಪ್ರಸಿದ್ಧ ಲುಸೈಲ್ ನಗರದಲ್ಲಿರುವ ಕತಾರಾ ಟವರ್‌ಗಳ ನಡುವಿನ ಸ್ಲಾಕ್‌ಲೈನ್‌ನಲ್ಲಿ ನಡೆಯುವ ಮೂಲಕ ಜಾನ್ ರೂಸ್ ಇತಿಹಾಸ ಸೃಷ್ಟಿಸಿದ್ದಾರೆ. ರೆಡ್ ಬುಲ್ ವಿಶ್ವ ಚಾಂಪಿಯನ್ ಆಗಿರುವ ಜಾನ್ ರೂಸ್ ಈ ನಡಿಗೆಯೊಂದಿಗೆ ವಿಶ್ವದ ಅತಿ ಉದ್ದದ ಎಲ್ಇಡಿ ಸ್ಲಾಕ್‌ಲೈನ್ ಫಿನಿಶರ್ ಎಂಬ ಹೊಸ ದಾಖಲೆಯನ್ನು ಸ್ಥಾಪಿಸಿದರು.

185 ಮೀಟರ್ ಎತ್ತರದಲ್ಲಿ, ಕಟ್ಟಡದ ಎರಡು ತುದಿಗಳನ್ನು ಸಂಪರ್ಕಿಸುವ ಹಗ್ಗದ ಉದ್ದಕ್ಕೂ ಜಾನ್ 150 ಮೀಟರ್ ನಡೆದರು. ಅದೂ ಕೂಡ ಕೇವಲ ಎರಡೂವರೆ ಸೆಂಟಿಮೀಟರ್ ದಪ್ಪದ ಹಗ್ಗದಲ್ಲಿ, ಅದರೊಂದಿಗೆ ಅಳವಡಿಸಲಾದ ಎಲ್ ಇಡಿ ಲೈಟ್ ಗಳ ಬೆಳಕಿನಲ್ಲಿ ಸಾಹಸ ನಡಿಗೆ ನಡೆಸಲಾಗಿದೆ. ಜಾನ್ ರೂಸ್ ತನ್ನ ಕೈಗಳನ್ನು ಮೇಲಕ್ಕೆತ್ತಿ, ತನ್ನ ಕಾಲುಗಳನ್ನು ಅಡ್ಡಲಾಗಿ ಹಗ್ಗದ ಮೇಲೆ ತಲೆಕೆಳಗಾಗಿ ನೇತಾಡುವ ಮೂಲಕ ಧೈರ್ಯದಿಂದ ನಡಿಗೆಯನ್ನು ಪೂರ್ಣಗೊಳಿಸಿದರು.

ಕತಾರಾ ಟವರ್‌ನ ಎರಡೂ ತುದಿಯಲ್ಲಿರುವ ಸ್ಟಾರ್ ಹೋಟೆಲ್‌ಗಳಾದ ರಾಫೆಲ್ಸ್ ಮತ್ತು ಫೇರ್‌ಮೌಂಟ್ ದೋಹಾ ನಡುವೆಯಾಗಿತ್ತು ಈ ನಡಿಗೆ. ಕತಾರ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಸಿಟ್ ಕತಾರ್ ಸಹಯೋಗದೊಂದಿಗೆ ಸ್ಲಾಕ್‌ಲೈನ್ ವಾಕನ್ನು ಆಯೋಜಿಸಲಾಗಿತ್ತು. ಎಸ್ಟೋನಿಯನ್ ರಾಷ್ಟ್ರೀಯ ತಾರೆ ಜಾನ್ ರೂಸ್ ಮೂರು ಬಾರಿ ಸ್ಲಾಕ್ ಲೈನ್ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.

error: Content is protected !! Not allowed copy content from janadhvani.com