janadhvani

Kannada Online News Paper

ಖುರ್ಆನ್ ಪ್ರತಿಯನ್ನು ಸುಟ್ಟುಹಾಕಿದ ಪ್ರಕರಣ- ಡೆನ್ಮಾರ್ಕ್ ರಾಯಭಾರಿಯನ್ನು ಕರೆಸಿ, ಸೌದಿ ಅರೇಬಿಯಾ ಖಂಡನೆ

ಎಲ್ಲಾ ಧಾರ್ಮಿಕ ಗ್ರಂಥಗಳನ್ನು, ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳನ್ನು ಉಲ್ಲಂಘಿಸುವ ಹೇಯ ಕೃತ್ಯಗಳನ್ನು ಕೊನೆಗೊಳಿಸುವಂತೆ ಸೌದಿ ಅರೇಬೀಯಾ ಕರೆ

ರಿಯಾದ್: ಖುರ್ಆನ್ ಪ್ರತಿಯನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ, ಡೆನ್ಮಾರ್ಕ್ ರಾಯಭಾರಿಯನ್ನು ಕರೆಸಿ, ತನ್ನ ತೀವ್ರ ಖಂಡನೆಯನ್ನು ತಿಳಿಸಿದೆ.

ಡೆನ್ಮಾರ್ಕ್‌ನಲ್ಲಿ ಖುರ್ಆನ್ ಪ್ರತಿಯನ್ನು ಸುಟ್ಟುಹಾಕಿರುವುದರ ವಿರುದ್ಧ. ಸೌದಿ ಅರೇಬಿಯಾದಲ್ಲಿನ ಡೆನ್ಮಾರ್ಕ್ ರಾಯಭಾರಿ ಚಾರ್ಜ್ ದಫೆಯನ್ನು ಕರೆಸಿ ಖಂಡನೆಯನ್ನು ತಿಳಿಸಲಾಗಿದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ರಾಯಭಾರಿ ಚಾರ್ಜ್ ದಫೆಹ್‌ಗೆ ಖಂಡನಾ ಪತ್ರವನ್ನು ಹಸ್ತಾಂತರಿಸಿದೆ, ಇದರಲ್ಲಿ ಎಲ್ಲಾ ಧಾರ್ಮಿಕ ಬೋಧನೆಗಳನ್ನು ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳನ್ನು ಉಲ್ಲಂಘಿಸುವ ಹೇಯ ಕೃತ್ಯಗಳನ್ನು ಕೊನೆಗೊಳಿಸುವಂತೆ ಸೌದಿ ಅರೇಬೀಯಾದ ಕರೆ ಇದೆ.

ಡೆನ್ಮಾರ್ಕ್‌ನಲ್ಲಿ, ಭಯೋತ್ಪಾದಕ ಗುಂಪು ಖುರ್ಆನ್ ಪ್ರತಿಯನ್ನು ಸುಟ್ಟುಹಾಕಿತು ಮತ್ತು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಕೂಗಿತ್ತು. ಇದನ್ನು ಖಂಡಿಸಿ ಸೌದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದೇ ತಿಂಗಳ 22ರಂದು ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಪತ್ರವನ್ನು ನೀಡಲಾಗಿದೆ.

error: Content is protected !! Not allowed copy content from janadhvani.com