janadhvani

Kannada Online News Paper

ಶುಭ ಸುದ್ದಿ: ಭಾರತೀಯ ಪಾಸ್‌ಪೋರ್ಟ್ ಹೊಂದಿದವರಿಗೆ ಇ-ವೀಸಾ- ಆಗಸ್ಟ್ 1 ರಿಂದ ಜಾರಿ

60 ದಿನಗಳ ಮಾನ್ಯತೆ ಇರುವ ಏಕ ಪ್ರವೇಶ ವೀಸಾದಲ್ಲಿ 16 ದಿನಗಳವರೆಗೆ ದೇಶದಲ್ಲಿ ಉಳಿಯಲು ಅವಕಾಶವಿದೆ

ಮಾಸ್ಕೋ: ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ರಷ್ಯಾಕ್ಕೆ ಇ-ವೀಸಾ ಘೋಷಿಸಲಾಗಿದೆ. ಆಗಸ್ಟ್ 1 ರಿಂದ, ಭಾರತೀಯರು ಇ-ವೀಸಾ ಬಳಸಿ ರಷ್ಯಾಕ್ಕೆ ಪ್ರಯಾಣಿಸಬಹುದು. ಭಾರತ ಸೇರಿದಂತೆ 52 ದೇಶಗಳ ಜನರು ಇ-ವೀಸಾ ಬಳಸಿ ರಷ್ಯಾಕ್ಕೆ ಪ್ರಯಾಣಿಸಬಹುದಾಗಿದೆ.

ಪ್ರಯಾಣಿಕರು ತಮ್ಮ ಉದ್ದೇಶಿತ ರಷ್ಯಾ ಪ್ರವಾಸಕ್ಕೆ ಕನಿಷ್ಠ 72 ಗಂಟೆಗಳ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ವೀಸಾ ಲಭಿಸಲು ನಾಲ್ಕು ದಿನಗಳ ಕಾಲಾವಕಾಶ ತೆಗೆದುಕೊಳ್ಳಲಿದೆ. ವೀಸಾ ಪಡೆಯಲು ಅರ್ಜಿದಾರರು $40 (ಸುಮಾರು ರೂ. 3300) ದ ದೂತಾವಾಸದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪ್ರವಾಸೋದ್ಯಮ(tourism) , ವ್ಯಾಪಾರ ಪ್ರವಾಸಗಳು (business trips) ಮತ್ತು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗಲು (guest visits) ಮುಂತಾದ ಉದ್ದೇಶಗಳಿಗೆ ಇ-ವೀಸಾದೊಂದಿಗೆ ರಷ್ಯಾಕ್ಕೆ ಪ್ರಯಾಣಿಸಬಹುದು. 60 ದಿನಗಳ ಮಾನ್ಯತೆ ಇರುವ ಏಕ ಪ್ರವೇಶ ವೀಸಾದಲ್ಲಿ 16 ದಿನಗಳವರೆಗೆ ದೇಶದಲ್ಲಿ ಉಳಿಯಲು ಅವಕಾಶವಿದೆ. ವರದಿಗಳ ಪ್ರಕಾರ, ಕೆಲವು ದೇಶಗಳ ನಾಗರಿಕರು ಹೋಟೆಲ್ ಕಾಯ್ದಿರಿಸಿದರೆ ಆರು ತಿಂಗಳವರೆಗೆ ಪ್ರವಾಸಿ ವೀಸಾವನ್ನು ಪಡೆಯಬಹುದು.

ಭಾರತೀಯರ ಮಟ್ಟಿಗೆ ಇ-ವೀಸಾ ಸೌಲಭ್ಯವು ಬಹಳಷ್ಟು ದಾಖಲಾತಿ ಪ್ರಕ್ರಿಯೆಯನ್ನು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ರಷ್ಯಾಕ್ಕೆ ಪ್ರಯಾಣಿಸಲು ಯೋಜಿಸುವ ಭಾರತೀಯ ಪ್ರವಾಸಿಗರಿಗೆ ಹೆಚ್ಚು ಅನುಕೂಲಕರವಾಗಿದೆ.

error: Content is protected !! Not allowed copy content from janadhvani.com