ರಿಯಾದ್: ನಿವಾಸ, ಕಾರ್ಮಿಕ ಮತ್ತು ಗಡಿ ಉಲ್ಲಂಘನೆಗಾಗಿ ಬಂಧಿಸಲಾದ 10,205 ವಲಸಿಗರನ್ನು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಲಾಗಿದೆ. ಒಂದು ವಾರದೊಳಗೆ ದೇಶದ ವಿವಿಧ ಪ್ರದೇಶಗಳಲ್ಲಿ ನಡೆಸಿದ ತಪಾಸಣೆಯಲ್ಲಿ 13,308 ಹೊಸ ಉಲ್ಲಂಘಕರನ್ನು ಬಂಧಿಸಲಾಗಿದೆ.
ಗೃಹ ಸಚಿವಾಲಯದ ಪ್ರಕಾರ, ಜುಲೈ 20 ರಿಂದ 26 ರವರೆಗೆ ದೇಶಾದ್ಯಂತ ಭದ್ರತಾ ಪಡೆಗಳ ವಿವಿಧ ಘಟಕಗಳು ನಡೆಸಿದ ತಪಾಸಣೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. 7,725 ನಿವಾಸ ಉಲ್ಲಂಘಿಸಿದವರು, 3427 ಗಡಿ ಉಲ್ಲಂಘಿಸಿದವರು ಮತ್ತು 2156 ಕಾರ್ಮಿಕ ಮತ್ತು ಕಾನೂನು ಉಲ್ಲಂಘಿಸಿದವರನ್ನು ಬಂಧಿಸಲಾಗಿದೆ.
ಗಡಿ ಮೂಲಕ ದೇಶ ಪ್ರವೇಶಿಸಲು ಯತ್ನಿಸುತ್ತಿದ್ದ 572 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಶೇ.62 ಯೆಮೆನಿಗಳು, ಶೇ.37 ಇಥಿಯೋಪಿಯನ್ನರು ಮತ್ತು ಶೇ.1 ಇತರ ದೇಶಗಳಿಂದ ಬಂದವರಾಗಿದ್ದಾರೆ. ಸೌದಿ ಅರೇಬಿಯಾವನ್ನು ತೊರೆಯಲು ಯತ್ನಿಸುತ್ತಿದ್ದ 58 ಮಂದಿ ಸಿಕ್ಕಿಬಿದ್ದಿದ್ದಾರೆ. ನಿವಾಸ ಮತ್ತು ಉದ್ಯೋಗ ನಿಯಮಗಳನ್ನು ಉಲ್ಲಂಘಿಸಿದವರಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮತ್ತು ವಿಷಯವನ್ನು ಗೌಪ್ಯವಾಗಿರಿಸಿದ್ದಕ್ಕಾಗಿ ಐವರನ್ನು ಬಂಧಿಸಲಾಗಿದೆ.