ವೀಸಾ ರಿಯಾಯ್ತಿ ಶುಲ್ಕ: ಸೌದಿ ವಿದೇಶಾಂಗ ಸಚಿವಾಲಯದ ಪಟ್ಟಿ ಬಿಡುಗಡೆ

ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶನ  ವೀಸಾ ಪಡೆಯಲು  ಶುಲ್ಕ ಕಡಿತ ಗೊಳಿಸಿದ  ದೇಶಗಳ ಪಟ್ಟಿಯನ್ನು ಸೌದಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ. ವೀಸಾ ಶುಲ್ಕ ಕಡಿತ ಗೊಳಿಸlಪಟ್ಟ ದೇಶಗಳ ಪಟ್ಟಿಯಲ್ಲಿ ಭಾರತವೂ ಒಳಗೊಂಡಿದೆ.

ಭಾರತೀಯರಿಗೆ 2000 ರಿಯಾಲ್ ವೀಸಾ ದರವಿದ್ದು, ಈ ತಿಂಗಳ ಆರಂಭದಲ್ಲಿ ಅದು 305 ರಿಯಾಲ್ ಆಗಿ ಕಡಿತ ಗೊಳಿಸಲಾಗಿತ್ತು. ಈ ಕುರಿತು ಮುಂಬೈ ಟ್ರಾವೆಲ್ ಏಜೆನ್ಸಿಗಳಿಗೆ ಭಾರತೀಯ ಸೌದಿ ರಾಜತಾಂತ್ರಿಕ ಕಾರ್ಯಾಲಯ ಮಾಹಿತಿ ನೀಡಿತ್ತು.ಆದರೆ ಈ ಕುರಿತು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದ ಅಧಿಕೃತ ಪ್ರಕಟಣೆಯು ಈಗಷ್ಟೇ  ಹೊರಬಂದಿದೆ.

ಈ ಪ್ರಕಾರ ಭಾರತ ಸೇರಿದಂತೆ ರೊಮೇನಿಯಾ, ಇಂಡೋನೇಷ್ಯಾ, ಕ್ರೊಯೇಷಿಯಾ, ಐರ್ಲೆಂಡ್, ಬಲ್ಗೇರಿಯಾ, ಸೈಪ್ರಸ್ ಮತ್ತು ರಷ್ಯಾ ಸೇರಿದಂತೆ 20 ರಾಷ್ಟ್ರಗಳ ನಾಗರಿಕರಿಗೆ ವೀಸಾ ದರದಲ್ಲಿ ರಿಯಾಯ್ತಿ ಲಭಿಸಲಿದೆ.ರಷ್ಯನ್ ಪ್ರಜೆಗಳಿಗೆ  790 ರಿಯಾಲ್, ಆಸ್ಟ್ರೇಲಿಯಾದವರಿಗೆ 506 ರಿಯಾಲ್ ಆಗಿದೆ ಈಗಿನ ದರ.

ಸೌದಿ ಅರೇಬಿಯಾ ಕೆ ಭಾರತದಿಂದ ಅತೀ ಹೆಚ್ಚು ಸಂದರ್ಶಕರು ಆಗಮಿಸುತ್ತಾರೆ. ಆದ್ದರಿಂದಲೇ ಸೌದಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಕುಟಂಬಕ್ಕೆ ಸೌದಿ ಸಂದರ್ಶನಕ್ಕೆ ಹೆಚ್ಚು ಅವಕಾಶ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!