janadhvani

Kannada Online News Paper

ಖತಾರ್: ರಂಝಾನ್ ಪ್ರಯುಕ್ತ ಉತ್ಪನ್ನಗಳ ಬೆಲೆಯೇರಿಕೆ ನಿಯಂತ್ರಣ

ದೋಹಾ: ರಂಝಾನ್ ಪ್ರಯುಕ್ತ 500 ಉತ್ಪನ್ನಗಳಿಗೆ ವಾಣಿಜ್ಯ ಸಚಿವಾಲಯವು ಬೆಲೆಯೇರಿಕೆ ತಡೆಯಲು ನಿಯಂತ್ರಣವನ್ನು ಏರ್ಒಡಿಸಿದೆ.ಇದರನ್ವಯ ಸರಕುಗಳು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗ ತೊಡಗಿದೆ. ರಂಝಾನ್ ಕೊನೆ ತನಕ ಹಲವು ಉತ್ಪನ್ನಗಳು ದರಕಡಿತದಲ್ಲಿ ಲಭ್ಯವಾಗಲಿದೆ.

ಸಚಿವಾಲಯ ಆದೇಶಿಸಿದ ಉತ್ಪನ್ನಗಳಿಗೆ ಹೆಚ್ಚಿನ ದರ ವಸೂಲು ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.ಗ್ರಾಹಕರ ಮೇಲೆ ವ್ಯಾಪಾರಿಗಳು ಅಧಿಕ ಬಾರವನ್ನು ಹೇರುವುದನ್ನು ತಡೆಗಟ್ಟಲು ಮತ್ತು ರಂಝಾನ್ ಮುಗಿಯುವ ವರೆಗೆ ಬೆಲೆಯಲ್ಲಿ ಸ್ಥಿರತೆಯನ್ನು ಕಾಯುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸತತ ಎಂಟನೇ ವರ್ಷ ರಂಝಾನ್ ನಲ್ಲಿ ಈ ನಿಯಂತ್ರಣ ಜಾರಿಗೊಳಿಸಲಾಗುತ್ತಿದೆ.500 ಉತ್ಪನ್ನಗಳಿಗೆ ನಿಯಂತ್ರಣ ಏರ್ಪಡಿಸಲಾಗಿದ್ದರೂ ಕಂಪನಿಗಳ ಇತರ ಬ್ರಾಂಡ್‌ಗಳಿಗೂ ಇದು ಅನ್ವಯವಾಗಲಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಉತ್ಪನ್ನಗಳು ದರ ಕಡಿತದಲ್ಲಿ ಲಭ್ಯವಾಗಲಿದೆ.

ಅಕ್ಕಿ , ಗೋದಿಹಿಟ್ಟು, ಸಕ್ಕರೆ, ಬೀಜಗಳು, ಬೀನ್ಸ್ ವರ್ಗಗಳು ಮುಂತಾದ ನಿತ್ಯೋಪಯೋಗಿ  ವಸ್ತುಗಳು, ಹಲ್ವಾ, ಬಿಸ್ಕೆಟ್, ಉಪ್ಪಿನಕಾಯಿ, ಮಕ್ರೂನಿ, ಹಣ್ಣು ಜಾಮ್ಗಳು, ಕಸ್ಟರ್ಡ್ ಪುಡಿ, ಜಲ್ಲಿಗಳು, ಸಿರಪ್‌ಗಳು, ಮತ್ತು ಕ್ಯಾರಮೆಲ್ ಕ್ರೀಮ್, ಬೇಕರಿ ಉತ್ಪನ್ನಗಳು ಮತ್ತು ಅಡುಗೆ ಎಣ್ಣೆಗಳು, ಹಾಲು, ಚಹಾ, ಕಾಪಿಹುಡಿ, ಮಕ್ಕಳ ಆಹಾರ, ಕರವಸ್ತ್ರ, ಡಯಾಪರ್ , ಜೇನು, ಹಾಟ್ ಸಾಸ್ ಮತ್ತು ತುಪ್ಪ, ಕಾನ್ಫ್ಲೆಕ್ಸ್, ಕುಡಿಯುವ ನೀರು, ಮತ್ತು ಹ್ಯಾಂಡ್ ವಾಶ್ ಮುಂತಾದವುಗಳ ಬೆಲೆಯಲ್ಲಿ ನಿಯಂತ್ರಣವಿದೆ.

ವಿವಿಧ ಉತ್ಪನ್ನಗಳು ಮತ್ತು ಗರಿಷ್ಟ ಬೆಲೆ:

ಗೋದಿ ಹಿಟ್ಟು: 1 ಮತ್ತು 2 ನಂಬರ್ (5ಕೆಜಿ-16 ರಿಯಾಲ್), ನಂಬರ್ 3 (5ಕೆಜಿ -19), ನಾಲ್ಕನೇ ನಂಬರ್ (10 ಕೆಜಿ -22.5 ರಿಯಾಲ್ ).ಬಾಸ್ಮತಿ ಅಕ್ಕಿ: ಪಂಜಾಬಿ ಗಾರ್ಡನ್ (5 ಕೆಜಿ – 26.75).ಹಸುವಿನ ಹಾಲು: ಬಲದ್ನಾ (ಫುಲ್ ಲೋ ಫಾಟ್ 1 ಲೀಟರ್ – 6 ರಿಯಾಲ್).ಗದೀರ್ :(ಫುಲ್ ಲೋ ಫ್ಯಾಟ್ 1.75 ಲೀಟರ್ – 10ರಿಯಾಲ್ ). ಅಲ್ ಮಹ :(ಫುಲ್ ಫ್ಯಾಟ್ 1 ಲೀಟರ್- 5 ರಿಯಾಲ್).

ಆಂಕರ್ ಹಾಲು ಪುಡಿ :(2.5 ಕೆಜಿ -66).ಮೊಸರು: ದಾಂಡಿ (ಪೂರ್ಣ ಲೋ ಫ್ಯಾಟ್ 1 ಕಿಲೋ 4.75).ಬೆಣ್ಣೆ: ಕಿರಿ (216 ಗ್ರಾಂ -7.75).ತುಪ್ಪ: ಅಮುಲ್ (1 ಕೆಜಿ -31.5), ಡಾಲ್ಡಾ ತರಕಾರಿ:
(1 ಕೆಜಿ -11.5), ಪಾಕ ಎಣ್ಣೆ: ಯಾರಾ(1.8 ಲೀಟರ್ -9).ಸೂರ್ಯಕಾಂತಿ ಎಣ್ಣೆ, ಯಾರಾ (1.8 ಲೀಟರ್ -11.75), ಸನ್ಲೈಟ್:(1.8-ಲೀಟರ್ -9.25).

ಘನೀಕೃತ ಕೋಳಿ: ಸಾದಿಯಾ(1 ಕೆಜಿ -12.5), ದೌಸ್ :(1 ಕೆಜಿ-11).ತಾಜಾ ಕೋಳಿ: ಅಲ್ ವಹ (1.2kg- 20.25 ರಿಯಾಲ್).ಇಂಡೊಮಿ ಚಿಕನ್ ನೂಡಲ್ಸ್ (75 ಗ್ರಾಂನ ಐದು ಪೊಟ್ಟಣ-5).

ಚಾಹುಡಿ: ಲಿಫ್ಟನ್(100 ಬ್ಯಾಗ್-14.75), ಬ್ರೂಕ್ಬಾಂಡ್ ರೆಡ್ ಲೇಬಲ್ (400 ಗ್ರಾಂ -11.75).ಸಾಲ್ಟ್: ನಸೋ (1 ಕೆಜಿ -2). ಟ್ಯೂನ ಪ್ಯಾಕೆಟ್ (185 ಗ್ರಾಂ -5).

ಕುಡಿಯುವ ನೀರು: ರಯ್ಯಾನ್ (1.5 ಲೀಟರ್- 6 ಬಾಟಲ್ -6.25).ಮೊಟ್ಟೆ: ಅಲ್ ವಹ ಮಧ್ಯಮ (30ಕ್ಕೆ -13.5). ಹನಿ: ಡೈಮಂಡ್ ಜೇನು (400 ಗ್ರಾಂ -13.25).

ತಪಾಸಣೆ ತೀವ್ರಗೊಳ್ಳುತ್ತಿದೆ:

ದೋಹಾ ಗ್ರಾಹಕರ ಕ್ಷೇಮ ಕಾನೂನಿನ  ಪ್ರಕಾರ ಎಲ್ಲಾ ಮಾಲ್ ಮತ್ತು ಹೈಪರ್ ಮಾರುಕಟ್ಟೆಗಳು ಮತ್ತು ಚಿಲ್ಲರೆ ವ್ಯಾಪಾರ ಕೇಂದ್ರಗಳಲ್ಲಿ ರಂಝಾನ್ ಅಂತ್ಯದ ವರೆಗೆ ತಪಾಸಣೆ ತೀವ್ರಗೊಳ್ಳಲಿದೆ.ನಷ್ಟವನ್ನು ತಗ್ಗಿಸಲು ಸಾಮಗ್ರಿಗಳನ್ನು ಬಚ್ಚಿಟ್ಟರೆ ಕಠಿಣ ಕ್ರಮಕೈಗೊಳ್ಳಲಾಗುವುದು.

ಅಧಿಕ ಬೆಲೆ ಈಡು ಮಾಡುವುದನ್ನು ಗಮನಿಸಿದರೆ ಗ್ರಾಹಕರು ಸಚಿವಾಲಯಕ್ಕೆ ದೂರು ನೀಡಬಹುದಾಗಿದೆ.ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆ(Twitter @MEC_QATAR),ಅಥವಾ  INSTRUCTIONS MEC_QATAR ಎಂಬ ಇಮೇಲ್ ವಿಳಾಸಕ್ಕೆ ದೂರು ನೀಡಬಹುದಾಗಿದೆ.

ವಿವಿಧ ಸಾಮಾಜಿಕ ಮತ್ತು ಸ್ವಯಂಸೇವಾ ಸಂಘಟನೆಗಳ ಮತ್ತು ವಾಣಿಜ್ಯ, ವ್ಯಾಪಾರ ಸಂಸ್ಥೆಗಳ ಸಹಕಾರದಿಂದ ಸಾಮಾಜಿಕ ಬದ್ಧತೆಯನ್ನು ಪೂರೈಸುವ ರೀತಿಯಲ್ಲಿ  ಸಚಿವಾಲಯವು ರಂಝಾನ್ ಮುಗಿಯುವ ವರೆಗೆ ಯೋಜನೆಯನ್ನು ಜಾರಿಗೊಳಿಸಿದೆ.

error: Content is protected !! Not allowed copy content from janadhvani.com