janadhvani

Kannada Online News Paper

“ಆ ಕವನ ಹೃದಯಸ್ಪರ್ಶಿಯಾಗಿತ್ತು” ಜೋರ್ಡಾನ್ ರಾಜರಿಂದ ಎ.ಪಿ. ಉಸ್ತಾದರಿಗೆ ಪತ್ರ

ಕೋಝಿಕ್ಕೋಡ್: ಭಾರತದ ಪ್ರವಾಸ ವೇಳೆ ತನಗಾಗಿ ವಾಚಿಸಿದ ಕವನವು ಹೃದಯಸ್ಪರ್ಶಿ ಯಾಗಿತ್ತು ಎಂದು ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾಹ್ ಕಾಂತಪುರಂ ಎ.ಪಿ. ಉಸ್ತಾದರಿಗೆ ಪತ್ರ ಬರೆದಿದ್ದಾರೆ.

ವಿಶ್ವಾದ್ಯಂತ ಶಾಂತಿ ನೆಲೆಗೊಳ್ಳಲು ಮತ್ತು ದೇಶಾದ್ಯಂತ ಶಿಕ್ಷಣ ಕ್ರಾಂತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿರುವ ಕಾಂತಪುರಂ ಉಸ್ತಾದರ ಸೇವೆಯು  ಶ್ಲಾಘನೀಯ ಎಂದು  ಜೋರ್ಡಾನ್ ರಾಜ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ನನ್ನ ಪ್ರಿಯ ಸ್ನೇಹಿತ” ಎಂದು ಪ್ರಾರಂಭಿಸುವ ಪತ್ರವನ್ನು ಕಿಂಗ್ ಅಬ್ದುಲ್ಲಾ ತನ್ನ ಹಸ್ತಾಕ್ಷರದಲ್ಲಿ ಬರೆದಿದ್ದಾರೆ.

ಜೋರ್ಡಾನ್ ಭಾರತವನ್ನು ಹತ್ತಿರದ ಸ್ನೇಹಿತ ಎಂದು ಪರಿಗಣಿಸುತ್ತಿದೆ. ಈ ಸ್ನೇಹವು ಭಯೋತ್ಪಾದನೆಯನ್ನು ಎದುರಿಸುವ ಪ್ರಯತ್ನಗಳನ್ನು ಬಲಪಡಿಸುತ್ತದೆ. ವಿಶ್ವ ಶಾಂತಿಗಾಗಿ ಕಾಂತಪುರಂ ನಡೆಸುವ ಪ್ರಯತ್ನಗಳು ಪ್ರಶಂಸಾರ್ಹವೆಂದು ಪತ್ರ ಹೇಳುತ್ತದೆ.

error: Content is protected !! Not allowed copy content from janadhvani.com