ಮಕ್ಕಾ: ರಂಝಾನ್ ತಿಂಗಳಲ್ಲಿ ಮಕ್ಕಾದಲ್ಲಿನ ಪವಿತ್ರ ಮಸೀದಿಯ ಸುತ್ತ ನಿಯಂತ್ರಣ ಏರ್ಪಡಿಸಲಾಗಿದೆ. ಉಮ್ರಾ ಯಾತ್ರಾರ್ಥಿಗಳಿಗೆ ಅನುಕೂಲವಾಗುಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಪವಿತ್ರ ರಂಝಾನ್ ನಲ್ಲಿ ಉಮ್ರಾ ಯಾತ್ರಾರ್ಥಿಗಳ ದೊಡ್ಡ ಪ್ರಮಾಣದ ವಿಪರೀತ ದಟ್ಟಣೆಯನ್ನು ಆಧರಿಸಿ ಈ ನಿರ್ದೇಶ ನೀಡಲಾಗಿದೆ.
ಕಾಬಾದ ಸುತ್ತಲೂ ತ್ವವಾಫ್ (ಮತ್ವಾಫ್) ಪ್ರವೇಶವನ್ನು ಉಮ್ರಾ ಯಾತ್ರಿಗಳಿಗೆ ಮಾತ್ರ ನಿಜಪಡಿಸಲು ಮಕ್ಕಾ ಗವರ್ನರ್ ಖಾಲೀದ್ ಅಲ್-ಫೈಸಲ್ ರಾಜಕುಮಾರ ಆದೇಶ ಹೊರಡಿಸಿದ್ದಾರೆ.
ಮಗ್ರಿಬ್ ನಮಾಜ್ ನಿಂದ ರಾತ್ರಿಯ ತರಾವೀಹ್ ನಮಾಜ್ ತನಕ ಉಮ್ರಾ ಯಾತ್ರಾರ್ಥಿಗಳನ್ನು ಹೊರತುಪಡಿಸಿ ಯಾರೂ ಮತಾಫ್‌ಗೆ ಪ್ರವೇಶಿಸುವಂತಿಲ್ಲ.ರಂಝಾನ್ ಕೊನೆಯ 10 ರಲ್ಲಿ ಮಗ್ರಿಬ್ ನಮಾಜ್ ನಿಂದ ಮಧ್ಯರಾತ್ರಿಯ ಖಿಯಾಮುಲ್ಲೈಲಿ ನಮಾಜ್ ವರೆಗೆ ಈ ನಿಯಂತ್ರಣ ಉಂಟಾಗಲಿದೆ.
ಉಮ್ರಾ ಹೊರತುಪಡಿಸಿ ಇತರೆ ಕರ್ಮಗಳಿಗಾಗಿ ಬರುವ ಭಕ್ತರು ಮತ್ವಾಫ್ ಹೊರತು ಇತರ ಕಡೆ ಪ್ರಾರ್ಥನೆ ನಡೆಸುವಂತೆ ಗವರ್ನರ್ ಸೂಚಿಸಿದ್ದಾರೆ.ಈ ನಿರ್ಧಾರ ದಿಂದ ಉಮ್ರಾ ಯಾತ್ರಾರ್ಥಿಗಳಿಗೆ ಸುಗಮವಾಗಿ ತಮ್ಮ ಕರ್ಮವನ್ನು ನಿರ್ವಹಿಸಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಂಝಾನಿನ ಕೊನೆಯ ಹತ್ತು ದಿನಗಳಲ್ಲಿ ಇ ಅ ತಿಕಾಫ್ ಕೂರಲು ಇಚ್ಚಿಸುವವರಿಗೆ ಹೊಸ ಅಭಿವೃದ್ಧಿ ಯೋಜನೆಯು ನಡೆಯುತ್ತಿರುವ ಮಸೀದಿಯ ಉತ್ತರ ಭಾಗದಲ್ಲಿ ಅವಕಾಶ ನೀಡಬಹುದೆಂದು ಖಲೀದ್ ಅಲ್ ಫೈಸಲ್ ಹೇಳಿದರು.
ಕಳೆದ ವರ್ಷ ರಂಝಾನ್ ನಲ್ಲಿ ಏರ್ಪಡಿಸಲಾದ ನಿಯಂತ್ರಣವು ಯಶಸ್ವಿಯಾದ ಕಾರಣ ಈ ವರ್ಷವೂ ನಿಯಂತ್ರಣವನ್ನು ಮುಂದುವರಿಸಲಾಗಿದೆ.