janadhvani

Kannada Online News Paper

ಕೋಮುವಾದ ಹಾಗೂ ಮಾದಕ ವ್ಯಸನಕ್ಕೆ ಕಡಿವಾಣ ಮೊದಲ ಆದ್ಯತೆಯಾಗಲಿ- ಮುಖ್ಯಮಂತ್ರಿಗೆ ಇಕ್ಬಾಲ್ ಬಾಳಿಲ ಮನವಿ

ಕೆಲವು ವರ್ಷಗಳಿಂದ ಕೋಮುವಾದ ಮತ್ತು ಮಾದಕ ವ್ಯಸನವು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನು ತಲೆತಗ್ಗಿಸುವಂತೆ ಮಾಡಿದೆ

ಮಂಗಳೂರು: ಸಂಸ್ಕೃತಿಯ ನೆಲೆಬೀಡಾಗಿರುವ ಕರುನಾಡು ಕೋಮುವಾದ ಹಾಗೂ ಮಾದಕ ವ್ಯಸನಗಳಿಗೆ ತತ್ತರಿಸಿ ಹೋಗಿವೆ.
ಅದನ್ನು ಸಂಪೂರ್ಣ ನಿರ್ನಾಮ ಗೊಳಿಸುವುದಕ್ಕೆ ಸರ್ಕಾರವು ಮೊದಲ ಆದ್ಯತೆ ನೀಡಬೇಕಿದೆ ಹಾಗೂ ಗೃಹ ಖಾತೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನೀಡುವಾಗ ಇದನ್ನು ಪರಿಗಣಿಸುವಂತೆಯೂ SKSSF ರಾಜ್ಯ ನಾಯಕ ಇಕ್ಬಾಲ್ ಬಾಳಿಲ ಈಮೈಲ್ ಮೂಲಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಪ್ರತೇಕವಾಗಿ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಸ್ವಚ್ಚತೆ, ಧಾರ್ಮಿಕ ಆಚರಣೆಗಳ ಮೂಲಕ ಅತ್ಯಂತ ಗೌರವ ಉಳಿಸಿಕೊಂಡ ಜಿಲ್ಲೆ. ಆದರೆ ಕೆಲವು ವರ್ಷಗಳಿಂದ ಕೋಮುವಾದ ಮತ್ತು ಮಾದಕ ವ್ಯಸನವು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನು ತಲೆತಗ್ಗಿಸುವಂತೆ ಮಾಡಿದೆ.

ಸೇವಾರಂಗದಲ್ಲಿ ಕ್ರಾಂತಿಯ ಹೆಜ್ಜೆ ಹಾಕಿರುವ SKSSF ಸಂಘಟನೆಯು ಸೌಹಾರ್ದತೆಯ ಉಳಿವಿವಾಗಿ ಪ್ರತೀ ವರ್ಷವೂ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ
ಪ್ರತೇಕವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ಸಾವಿರಾರು ಜನರನ್ನು ಸೇರಿಸಿ ಅದ್ಬುತ ಕಾರ್ಯಕ್ರಮ ನೀಡುವ ಮೂಲಕ ಕೋಮುವಾದ ಮಾದಕ ವ್ಯಸನ ನಿರ್ನಾಮಕ್ಕಾಗಿ ಪ್ರಯತ್ನಿಸಲಾಗಿದೆ. ಆದರೂ ಸಂಪೂರ್ಣ ಕಡಿವಾಣ ಬೀಳಬೇಕಾದ ಅನಿವಾರ್ಯವಿದೆ.

ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದರೆ ಸಮರ್ಥವಾಗಿ ಎದುರಿಸಬಲ್ಲ ನಾಯಕನನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕೆಂದು ಇಕ್ಬಾಲ್ ಬಾಳಿಲ ಮನವಿಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com