janadhvani

Kannada Online News Paper

1

ಬದಲಾವಣೆಯ ಗಾಳಿ ಬೀಸಬೇಕಿರುವುದು ಕರಾವಳಿಯ ಭಾಗದಿಂದ- ಮುನೀರ್ ಕಾಟಿಪಳ್ಳ

ಕರಾವಳಿಯಲ್ಲಿ ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮರಳುಗಾರಿಕೆ ಮುಂತಾದ ಅಕ್ರಮ ದಂಧೆಗಳಿಗೆ ಮಾತ್ರ ಎಗ್ಗಿಲ್ಲದ "ಸ್ವಾತಂತ್ರ್ಯ" ವಿತ್ತು

ಪ್ರಯೋಗ ಶಾಲೆಯ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ‌ ಆಡಳಿತದಡಿ “ಪೊಲೀಸ್ ರಾಜ್” ನಿರ್ಮಾಣಗೊಂಡಿತ್ತು.

ಮೆರವಣಿಗೆ, ಪ್ರತಿಭಟನೆಗೆ ಅನುಮತಿ ಪಡೆಯಲು ಹರಸಾಹಸ ಪಡಬೇಕಿತ್ತು. ಪೊಲೀಸರು ಸೂಚಿಸಿದ ಸ್ಥಳದಲ್ಲಷ್ಟೇ ಪ್ರತಿಭಟನೆಗೆ ಅವಕಾಶ ದೊರಕುತ್ತಿತ್ತು. ಒಂದು ಸಣ್ಣ ಪ್ರತಿಭಟನೆಗೂ ಪೊಲೀಸ್ ಕಮೀಷನರ್ ಕಚೇರಿಯಲ್ಲೇ ಅನುಮತಿ ಪಡೆಯಬೇಕಿತ್ತು. ಪ್ರತಿಭಟನೆಗೆ ಅನುಮತಿ ಪಡೆಯುವುದೇ ಒಂದು ಹೋರಾಟವಾಗಿತ್ತು.

ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮರಳುಗಾರಿಕೆ ಮುಂತಾದ ಅಕ್ರಮ ದಂಧೆಗಳಿಗೆ ಮಾತ್ರ ಎಗ್ಗಿಲ್ಲದ “ಸ್ವಾತಂತ್ರ್ಯ” ವಿತ್ತು. ಅಂತಹ ಲಾಬಿಗಳ ಪಂಟರುಗಳೆಲ್ಲಾ ಬಿಜೆಪಿ ಶಾಸಕರುಗಳು ಎಡಭಾಗ, ಬಲಭಾಗಗಳಲ್ಲಿ ಮಿಂಚುತ್ತಿದ್ದರು. ಇಂತಹ ದಂಧೆಕೋರರ ವಿರುದ್ದ ದೂರು ನೀಡಿದರೆ, ದೂರುದಾರರ ಮೊಬೈಲ್ ನಂಬರ್ ಸಹಿತ ಪೂರ್ತಿ ವಿವರ ನೇರವಾಗಿ ದಂಧಕೋರರಿಗೆ ತಲುಪುತ್ತಿತ್ತು. ಇದರಿಂದ ಜನ ದಂಧೆಕೋರ ಕ್ರಿಮಿನಲ್ ಗಳ ಸುದ್ದಿ ಎತ್ತಲು ಭಯಪಡುವಂತಾಗಿತ್ತು.

ಪೊಲೀಸ್ ಇಲಾಖೆಯನ್ನು ಸರಿಪಡಿಸುವುದು ಅಂದರೆ, ಕೋಮುವಾದೀಕರಣದಿಂದ ಹೊರತರುವುದು ಮಾತ್ರ ಅಲ್ಲ, ಕ್ರಿಮಿನಲೀಕರಣದಿಂದಲೂ ಮುಕ್ತಗೊಳಿಸುವುದು. ಅದು ಒಂದನ್ನು ಬಿಟ್ಟು ಮತ್ತೊಂದಿಲ್ಲ.ಜನತೆಗೆ ಅದರ ಅನುಭವ ಆಗುವಂತೆ ನೋಡಿಕೊಳ್ಳುವುದು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಪೊಲೀಸ್ ಇಲಾಖೆಯನ್ನು ಸರಿಪಡಿಸುವ ಕೆಲಸವನ್ನು ಆರಂಭಿಸಬೇಕು. ಜನಪರ ಹೋರಾಟಗಳಿಗೆ ಇರುವ ನಿರ್ಬಂಧ, ಅತಿಯಾದ ನಿಯಂತ್ರಣಗಳನ್ನು ತೆಗೆದು ಹಾಕಬೇಕು. ದಂಧೆಕೋರರಿಗೂ ಪೊಲೀಸ್ ಠಾಣೆಗಳಿಗೂ ಇರುವ ಸುಮಧುರ ಸಂಬಂಧವನ್ನು ಕಡಿದು ಹಾಕಬೇಕು. ಆ ಮೂಲಕ ಜನ ಸರಾಗವಾಗಿ ಉಸಿರಾಡುವ ವಾತಾವರಣ ನಿರ್ಮಿಸಬೇಕು. ಆ ಮೂಲಕ ತುಳುನಾಡಿನಲ್ಲೂ ಕಾಂಗ್ರೆಸ್ ಜನತೆಗೆ ಹತ್ತಿರವಾಗಬಹುದು.

ಮುನೀರ್ ಕಾಟಿಪಳ್ಳ ಅವರ ಫೇಸ್ಬುಕ್ ಪುಟದಿಂದ

1
1
1

error: Content is protected !! Not allowed copy content from janadhvani.com