janadhvani

Kannada Online News Paper

ವಿದ್ಯುತ್ ಬಿಲ್ ಕಟ್ಟಬೇಡಿ ಎನ್ನಲು ಯಾವ ನೈತಿಕತೆಯಿದೆ.?- ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಿರುಗೇಟು ನೀಡಿದ ಇಕ್ಬಾಲ್ ಬಾಳಿಲ

ನೂರಾರು ಬರವಸೆಯನ್ನು ನೀಡಿ ಒಂದೇ ಒಂದು ಭರವಸೆಯನ್ನು ಈಡೇರಿಸದ ಕಟೀಲರಿಗೆ ಈ ಕುರಿತು ಮಾತನಾಡುವ ನೈತಿಕತೆ ಇಲ್ಲ

ಕೋಮುವಾದ, ಬೆಲೆಯೇರಿಕೆ, ದುರಹಂಕಾರಗಳಿಗೆ ಬೇಸೆತ್ತು ಕರ್ನಾಟಕದ ಜನತೆ ಪರ್ಯಾಯ ವ್ಯವಸ್ಥೆ ಕಾಂಗ್ರೆಸ್‌ ಎಂದು ಒಪ್ಪಿಕೊಂಡು ಅಧಿಕಾರದಲ್ಲಿ ತಂದು ನಿಲ್ಲಿಸಿವೆ.
ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷವೂ ರಾಜ್ಯಕ್ಕೆ ಸಮರ್ಥ ನಾಯಕನಿಗೆ ಮುಖ್ಯಮಂತ್ರಿ ಪಟ್ಟವನ್ನೂ ನೀಡಿದೆ.

ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಜನರ ನಾಡಿ ಮಿಡಿತ ಅರಿತ ಜಾತ್ಯಾತೀತ ನಾಯಕರು ಸೇವಾ ರಂಗಕ್ಕೆ ಧುಮುಕುತ್ತಿದ್ದಾರೆ.
5 ಗ್ಯಾರಂಟಿ ಕಾರ್ಡ್‌ನ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅನುಮೋದನೆಯೂ ಆಗಿರುತ್ತದೆ.

ಇದರ ಮದ್ಯೆ ಬಿಜೆಪಿಯ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾದ್ಯಮದವರ ಮುಂದೆ ಬಂದು ಪದೇ ಪದೇ ಕರೆಂಟ್ ಬಿಲ್ ಕಟ್ಟಬೇಡಿ ಎಂದು ವ್ಯೆಂಗ್ಯ ಮಾಡುತ್ತಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿವೆ.

ನೂರಾರು ಬರವಸೆಯನ್ನು ನೀಡಿ ಒಂದೇ ಒಂದು ಭರವಸೆಯನ್ನು ಈಡೇರಿಸದ ಕಟೀಲರಿಗೆ ಈ ಕುರಿತು ಮಾತನಾಡುವ ನೈತಿಕತೆ ಇಲ್ಲವೆಂದು ಯುವ ವಾಗ್ಮಿ, ಕರ್ನಾಟಕ ಭಾವೈಕ್ಯತಾ ಪರಿಷತ್ತು ದ.ಕ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

ಕೊಟ್ಟ ಭರವಸೆಯನ್ನು ಈಡೇರಿಸುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ. ಆದ್ದರಿಂದ ಜನರು ನಿರೀಕ್ಷೆಯಿಟ್ಟು ಅಧಿಕಾರಕ್ಕೆ ತಂದಿರುತ್ತಾರೆ.
ಇನ್ನಾದರೂ ನಾಟಕೀಯ ಮಾತುಗಳನ್ನು ನಿಲ್ಲಿಸಿ ಪ್ರಬುದ್ಧ ರಾಜಕಾರಣಿಯಾಗಿ ಮುಂದುವರಿಯಲು ಪ್ರಯತ್ನಿಸಿ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

error: Content is protected !! Not allowed copy content from janadhvani.com