janadhvani

Kannada Online News Paper

ಉಮ್ರಾ ಯಾತ್ರಿಕ ಸೌದಿಯಲ್ಲಿ ಮೃತ್ಯು: ಕೆ.ಸಿ.ಎಫ್ ಸಹಕಾರದೊಂದಿಗೆ ಅಂತ್ಯಕ್ರಿಯೆ

ಮಾರ್ಚ್ 15: ಉಮ್ರಾ ಯಾತ್ರೆಗೆಂದು ತೆರಳಿದ್ದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಳಂಬೆ ನಿವಾಸಿ ಹಸನಬ್ಬರವರು ಸೌದಿ ಅರೇಬಿಯಾದ ಬುರೈದ ದಲ್ಲಿ ತನ್ನ ಮಗನ ನಿವಾಸದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಮರಣ ಹೊಂದಿದ್ದರು.

ಬುರೈದ ಕಿಂಗ್ ಪಹದ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಜೀವ ಉಳಿಸಲಾಗಲಿಲ್ಲ.ಅಲ್ ಖಸೀಂ ವ್ಯಾಪ್ತಿಯ ಬುರೈದ ಜಾಮಿಅ ಅಲ್ ವಹಾಬ್ ನಲ್ಲಿ ಮಯ್ಯಿತ್ ನಮಾಝಿನ ನಂತರ ಅಲ್ ವಹಾಬ್ ಖಬರ್ ಸ್ಥಾನದಲ್ಲಿ ಬಂದು ಬಳಗ ಹಾಗೂ ಕೆ.ಸಿ.ಎಫ್ ಕಾರ್ಯಕರ್ತರ ಸಹಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ನೇತಾರರಾದ ಅಶ್ರಫ್ ಕಿನ್ಯ ಹಾಗೂ ರಝಾಖ್ ಉಳ್ಳಾಲ ರವರ ಮಾರ್ಗದರ್ಶನದಲ್ಲಿ ಅಲ್ ಖಸೀಂ ಝೋನಿನ ನೇತಾರರಾದ ಅಬ್ದುಲ್ಲ ಅಶ್ರಪ್ ಕೊಯಿಲ, ತಾಜುದ್ದೀನ್ ಕೆಮ್ಮಾರ,ಸಲೀಂ ಉಳ್ಳಾಲ ಯಾಕೂಬ್ ಸಖಾಫಿ ರವರುಗಳ ಸತತ ಪ್ರಯತ್ನದಿಂದ ದಫನ ಕ್ರಿಯೆಗೆ ಬೆಕಾದ ಕಚೇರಿ ಕಡತಗಳು ಹಾಗೂ ದಾಖಲೆ ಪತ್ರಗಳನ್ನು ಸಕಾಲದಲ್ಲಿ ಸರಿಪಡಿಸಿ ಅಂತ್ಯ ಕ್ರಿಯೆಗೆ ಸಹಕರಿಸಿದರು

error: Content is protected !! Not allowed copy content from janadhvani.com