ಮುಹ್‌ಯಿದ್ದೀನ್ ಜುಮುಅ ಮಸ್ಜಿದ್ ಮಂಗಳಪೇಟೆ ಇದರ ವತಿಯಿಂದ ವಾರಂಪ್ರತೀ ನಡೆಸಿಕೊಂಡು ಬರುವ ಸ್ವಲಾತ್ ಮಜ್ಲಿಸ್ ನ ಮೂವತ್ತನೇ ವಾರ್ಷಿಕ ಸಮಾರಂಭವು ಇದೇ ಬರುವ ಮಾರ್ಚ್ 17 ಮತ್ತು 18 ರಂದು ನಡೆಯಲಿದೆ.17 ರಂದು ಸಯ್ಯಿದ್ ಜಮಾಲುಲೈಲ್ ತಂಙಳ್ ಕಾಜೂರ್ ರವರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಮಾರ್ಚ್ 18 ರಂದು ನಡೆಯುವ ಸ್ವಲಾತ್ ನೇತೃತ್ವವನ್ನು ಬಹುಭಾಷ ವಿದ್ವಾಂಸರು, ಮರ್ಕಝ್ ಮುದರ್ರಿಸರಾದ ಸಯ್ಯಿದ್ ಜಝೀಲ್ ಶಾಮಿಲ್ ಇರ್ಪಾನಿ ಜಮಾಲುಲೈಲ್ ತಂಙಳ್ ಕೇರಳರವರು ವಹಿಸಲಿದ್ದಾರೆ.
ಮಂಗಳಪೇಟೆ ಜಮಾಅತ್ ಅಧ್ಯಕ್ಷರಾದ ಸಿ ಅಬ್ದುಲ್ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸ್ಥಳೀಯ ಖತೀಬ್ ಶಫೀಖ್ ಸಖಾಫಿ ಸ್ವಾಗತ ನಿರ್ವಹಿಸಲಿದ್ದು,ಮಂಗಳಪೇಟೆ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟನೆ ಮಾಡಲಿದ್ದಾರೆ.
ಬಜಪೆ ಮುದರ್ರಿಸ್ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ,ಅಲ್ ಕಾಮಿಲ್ BE ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಹಲವಾರು ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಶರಫ್ರಾಝ್ ನವಾಝ್ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.