janadhvani

Kannada Online News Paper

SჄS ರಾಜ್ಯ ಮಹಾಸಭೆ ಮಾರ್ಚ್ 18 ಹಾಸನದಲ್ಲಿ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ವಾರ್ಷಿಕ ಕೌನ್ಸಿಲ್ ಹಾಗೂ ಮುಂದಿನ ಎರಡು ವರ್ಷಗಳ ಪದಾಧಿಕಾರಗಳ ಆಯ್ಕೆ ಕಾರ್ಯಕ್ರಮವು ಮಾರ್ಚ್ 18 ಶನಿವಾರ ಬೆಳಗ್ಗೆ ಹತ್ತು ಗಂಟೆಯಿಂದ ಹಾಸನದ ಖುಬಾ ಸಭಾಂಗಣದಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಮೌಲಾನಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಹಝ್ರತ್ ಉಧ್ಘಾಟನೆ ಮಾಡಲಿದ್ದಾರೆ.

ಕೇರಳ ಮುಸ್ಲಿಂ ಜಮಾಅತ್ ಡೈರೆಕ್ಟರ್ ಪ್ರೊಫೆಸರ್ ಯು.ಸಿ.ಅಬ್ದುಲ್ ಮಜೀದ್ ಕಣ್ಣೂರು, ಸಂಘಟನಾ ತರಬೇತಿ‌ ನಡೆಸಿ ಕೊಡಲಿದ್ದಾರೆ.

ಸಭೆಯಲ್ಲಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ಚರ್ಚೆ ನಡಯಲಿದ್ದು ವಿವಿಧ ಕಾರ್ಯ ಯೋಜನೆಗಳಿಗೆ ರೂಪು ಕೊಡಲಾಗುವುದೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸ‌ಅದಿ ಕೊಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: Content is protected !! Not allowed copy content from janadhvani.com