janadhvani

Kannada Online News Paper

ಯುಎಇ: ರಖಂ ಚಿನ್ನ ವ್ಯಾಪಾರ ಮೌಲ್ಯವರ್ಧಿತ ತೆರಿಗೆಯಿಂದ ಮುಕ್ತ

ದುಬೈ: ಚಿನ್ನ ಮತ್ತು ವಜ್ರದಂತಹ ಅಮೂಲ್ಯ ಲೋಹಗಳ ರಖಂ ವ್ಯಾಪಾರವನ್ನು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯಿಂದ ಮುಕ್ತಗೊಳಿಸಲಾಗಿದೆ. ಖರೀದಿದಾರರಿಗೆ ಚಿನ್ನದ ಆಭರಣವನ್ನು ಕೊಳ್ಳುವಾಗ ಇದರ ಫಲ ಪಡೆಯಲು ಸಾಧ್ಯವಾಗದೆ ಇರಬಹುದು. ಆದರೆ ವ್ಯಾಪಾರ ವಲಯದಲ್ಲಿ ಇದರ ಪ್ರತಿಫಲನ ಶೀಘ್ರದಲ್ಲೇ ಉಂಟಾಗಲಿದೆ ಎಂದು ಚಿನ್ನ ವ್ಯಾಪಾರಸ್ಥರು ನಂಬುತ್ತಾರೆ.

ಚಿನ್ನದ ಬದಲಿಗೆ ವ್ಯಾಟ್ ನ್ನು ಆಭರಣ ನಿರ್ಮಾಣ ಕೆಲಸಕ್ಕೆ ಸೀಮಿತ ಗೊಳಿಸುವಂತೆ ಚಿನ್ನ ವ್ಯಾಪಾರಿಗಳು ಈ ಹಿಂದೆಯೇ ಒತ್ತಾಯಿಸಿದ್ದರು.

ಹೊಸ ಒಡಂಬಡಿಕೆಯು ಮೇ 1 ರಂದು ಜಾರಿಗೆ ಬಂದಿದೆ.ಆದರೆ ಸಣ್ಣ ಚಿಲ್ಲರೆ ವ್ಯಾಪಾರಿಗಳು ಪ್ರತಿ ಮಾರಾಟದಲ್ಲಿ ಶೇ 5 ರಷ್ಟು ವ್ಯಾಟ್ ಸೇರಿಸುವುದು ಮುಂದುವರಿಯಲಿದೆ. ಯುಎಇ ಮಂತ್ರಿಸಭೆಯು ಇದನ್ನು  ಘೋಷಿಸಿದೆ.ಚಿನ್ನದ ಮಾರುಕಟ್ಟೆಯಲ್ಲಿ ಕೈಗಾರಿಕಾ ಪ್ರಮಾಣದಲ್ಲಿ ವ್ಯಾಟ್ ಅನ್ನು ತೆರವುಗೊಳಿಸುವ ನಿರ್ಧಾರ ಪರಿಣಾಮಕಾರಿಯಾಗಿದೆ ಎಂದು ಕ್ಯಾಬಿನೆಟ್ ಸಭೆ ಘೋಷಿಸಿತು.

2018 ರ ಜನವರಿ 1ರಂದು ಚಿನ್ನ ಮತ್ತು ವಜ್ರ ಆಭರಣ ಕ್ಷೇತ್ರದಲ್ಲಿ ಸಹ ಇತರ ಕ್ಷೇತ್ರಗಳಂತೆ ವ್ಯಾಟ್ ಜಾರಿಗೆ ಬಂದಿತು.ಇದು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಅನ್ವಯವಾಗಿದ್ದವು.

ಹೊಸ ನಿರ್ಧಾರದ ಪ್ರಕಾರ ವ್ಯಾಪಾರಸ್ಥರು ರಖಂ ಆಗಿ ಚಿನ್ನವನ್ನು ಖರೀದಿಸಿದಾಗ, ಇನ್ನು ಮುಂದೆ ವ್ಯಾಟ್ ಅನ್ನು ಪಾವತಿಸಬೇಕಾಗಿಲ್ಲ.ಆದಾಗ್ಯೂ, ಸಣ್ಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟವಾಗುವ ಪ್ರತಿಯೊಂದು ಆಭರಣದ 5 ಶೇಕಡಾ ವ್ಯಾಟ್ ಅನ್ನು ಪಾವತಿಸಬೇಕು.ಚಿನ್ನ ಮತ್ತು ವಜ್ರ ಆಭರಣಗಳ ಮಾರುಕಟ್ಟೆಯಲ್ಲಿ ಇದು ಉತ್ಸಾಹವನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.

ಯುಎಇ ಸರಕಾರವು ಚಿನ್ನದ ಮಾರುಕಟ್ಟೆಯನ್ನು ಬಹಳ ಮುತುವರ್ಜಿಯಿಂದ ನೋಡಿತ್ತಿದೆ ಎನ್ನುವುದು ಈ ಕ್ರಮದಿಂದ ಕಂಡು ಬರುತ್ತಿದೆ ಎಂದು ಮಲಬಾರ್ ಗೋಲ್ಡಿನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಪಿ. ಶಂಲಾಲ್ ಅಹ್ಮದ್ ತಿಳಿಸಿದ್ದಾರೆ. ಗ್ರಾಹಕರಿಗೆ ಈಗ ಇದರ ಫಲ ಲಭಿಸದಿದ್ದರೂ ಮುಂದೆ ಆಭರಣ ನಿರ್ಮಾಣ ಕೆಲಸಕ್ಕೆ ಮಾತ್ರ ವ್ಯಾಟ್ ವಿಧಿಸಬಹುದೆಂಬ ನಿರೀಕ್ಷೆಯಿದೆ. ಈಗಲೂ 24 ಕ್ಯಾರೆಟ್ ಚಿನ್ನಕ್ಕೆ ವ್ಯಾಟ್ ವಿಧಿಸಲಾಗುವುದಿಲ್ಲ.

ದುಬೈ ಕೇಂದ್ರೀಕೃತವಾಗಿ ಬಂಗಾರ ರಫ್ತು ಮಾಡುವವರಿಗೆ ಈ ತೀರ್ಮಾನದಿಂದ ಲಾಭ ಉಂಟಾದಲಿದೆ ಎಂದು ಶಾಂಲಾಲ್ ಹೇಳಿದರು. ಸ್ವರ್ಣ ಮಾರುಕಟ್ಟೆಯಲ್ಲಿ ಈಗಾಗಲೇ 30-40 ಶೇಕಡಾ ಮಾರಾಟ ಕಡಿಮೆ ದಾಖಲಿಸಿದೆ. ಹೊಸ ತೀರ್ಮಾನದಿಂದ ಈ ಮಂದಗತಿಗೆ ಬದಲಾವಣೆ ಉಂಟಾಗಲಿದೆ ಎನ್ನುವ ನಿರೀಕ್ಷೆ ಇರುವುದಾಗಿ ಶಾಂಲಾಲ್ ನುಡಿದರು. ಸ್ವರ್ಣ ಖರೀದಿಸುವಾಗ ವ್ಯಾಟ್ ರಹಿತವಾಗಿ ಲಭಿಸುವ ಲಾಭವನ್ನು ಇನ್ಯಾವುದಾದರೂ ರೀತಿಯಲ್ಲಿ ಗ್ರಾಹನಿಕೆ ನೀಡಲು ಸಣ್ಣ ವ್ಯಾಪಾರಿಗಳಿಗೆ ಸಾಧ್ಯವಾಗಬಹುದು ಎಂದು ಮಿಡ್ಲ್ ಈಸ್ಟ್‌ ಇನ್ಸೂರೆನ್ಸ್ ರಿವ್ಯೂ ಡೆಪ್ಯೂಟಿ ಎಡಿಟರ್ ಭಾಸ್ಕರ್ ರಾಜ್ ತಿಳಿಸಿದರು.

ಮಾರುಕಟ್ಟೆಯ ಫೈಪೊಟಿಯು ಬೆಲೆ ಕಡಿತಗೊಳಿಸಲು ವ್ಯಾಪಾರಿಗಳನ್ನು ಪ್ರೇರೇಪಿಸಬಹುದು. ಆ ಮೂಲಕ ವ್ಯಾಪರದ ವೃದ್ಧಿಯೂ ಉಂಟಾಗಲಿದೆ. ಅತ್ಯಧಿಕ ಮಟ್ಟದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅದು ಸಹಾಯಕವಾಗಲಿದೆ. ಈ ವರೆಗೆ ಚಿನ್ನದ ಬಾರ್‌ಗಳು ಮಾತ್ರ ‘ಝೀರೋ ರೇಟಡ್’ ವಿಭಾಗದಲ್ಲಿ ಗಣಿಸಲ್ಪಡುತ್ತವು. ಜನವರಿಯಿಂದ ಮಾರುಕಟ್ಟೆಯಲ್ಲಿ ಬಾರೀ ಮಂದಗತಿ ಉಂಟಾಗಿರುವುದಾಗಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

error: Content is protected !! Not allowed copy content from janadhvani.com