janadhvani

Kannada Online News Paper

ದುಬೈನಲ್ಲಿ ವಸತಿ ಬಾಡಿಗೆ ಅಗ್ಗವಾಗುತ್ತಿರುವುದಾಗಿ ಸಮೀಕ್ಷೆ

ದುಬೈ: ದುಬೈನಲ್ಲಿ ವಸತಿ ಬಾಡಿಗೆಯು ಅಗ್ಗವಾಗುತ್ತಿದೆ. ಅವೀರ್, ಅಲ್ ಖೂಸ್ ಮತ್ತು ಖಿಸೈಸ್ ಮುಂತಾದೆಡೆ ಸ್ಟುಡಿಯೋ ಅಪಾರ್ಟ್ಮೆಂಟ್ ಗಳು ವರ್ಷಕ್ಕೆ 19,000 ರಿಂದ 25,000 ರವರೆಗೆ ಲಭ್ಯವಿವೆ ಎಂದು ಅಥಾರಿಟಿಯ ಸಮೀಕ್ಷೆಯು ಬಹಿರಂಗಪಡಿಸಿದೆ.

ಕಳೆದ ವರ್ಷ ಅತಿ ಕಡಿಮೆ ಬಾಡಿಗೆ 20,000 ದಿರ್ಹಂ ಆಗಿತ್ತು.ಆದಾಗ್ಯೂ, ಜೆಬಿಆರ್ ನಂತಹ ಸ್ಥಳಗಳಲ್ಲಿ ಬಾಡಿಗೆ ಹೆಚ್ಚಿಸಲಾಗಿಲ್ಲ. ಒಂದು ಕೋಣೆಯ ಫ್ಲಾಟ್ ಕನಿಷ್ಠ 95000 ದಿರ್ಹಂಗೆ ಲಭ್ಯವಿದೆ.ದುಬೈ ಟ್ರ್ಯಾಮ್, ಮೆಟ್ರೋ ಸ್ಟೇಷನ್ ಪರಿಸರಗಳಲ್ಲಿ ಇನ್ನೂ ಹೆಚ್ಚು ಪಾವತಿಸಬೇಕಾಗುತ್ತದೆ.

ಇಂಟರ್ನ್ಯಾಷನಲ್ ಮೀಡಿಯಾ ಪ್ರೊಡಕ್ಷನ್ ವಲಯದಲ್ಲಿನ ಬಾಡಿಗೆ ನಗರಕ್ಕಿಂತ ಕಡಿಮೆ ಎನ್ನಲಾಗಿದೆ.50000 ನೀಡಿದರೆ ಒಂದು ವರ್ಷಕ್ಕೆ ಫ್ಲಾಟ್ ಲಭ್ಯವಿದೆ.ಕನಿಷ್ಠ ಬಾಡಿಗೆ ಅವೀರ್ನಲ್ಲಿ ದಾಖಲಾಗಿದೆ. ಸತ್ವಾ, ಅಬು ಹೈಲ್ ಮತ್ತು ಜಾಫಿಲಿಯ ಮುಂತಾದೆಗೆ ಹೋಲಿಸಿದರೆ ಬಾಡಿಗೆ ದುಬಾರಿ ಎನ್ನಲಾಗಿದೆ.

ಫ್ರೀ ಹೋಲ್ಡ್ ಸ್ಥಳಗಳಲ್ಲಿ ಇನ್ವೆಸ್ಟ್ಮೆಂಟ್ ಪಾರ್ಕ್ ಪ್ರದೇಶದಲ್ಲಿ ಕಡಿಮೆ ಬಾಡಿಗೆ ಇದೆ.ಫ್ಲಾಟ್ ಪಡೆಯಲು ಇಲ್ಲಿ 25,000 ದಿರ್ಹಂ ನೀಡಬೇಕಾಗಿದೆ.ಕ್ರೀಡಾ ನಗರ ಮತ್ತು ಜುಮೇರಾದಲ್ಲಿ ಕನಿಷ್ಠ 40,000 ದಿರ್ಹ ಪಾವತಿಸಬೇಕಾಗುತ್ತದೆ.

error: Content is protected !! Not allowed copy content from janadhvani.com