ಜಿದ್ದಾ: ಸೌದಿ ಹಜ್ ಸಚಿವಾಲಯು ಈ ವರ್ಷದ ದೇಶೀಯ ಹಜ್ ಪ್ಯಾಕೇಜುಗಳನ್ನು ಈ ತಿಂಗಳ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದಿದೆ.ಸೂಕ್ತವಾದ ಪ್ಯಾಕೇಜುಗಳನ್ನು ಆಯ್ಕೆ ಮಾಡಲು ಇದು ಯಾತ್ರಿಕರಿಗೆ ಸಹಾಯ ಮಾಡಲಿದೆ.
ಆಗಸ್ಟ್ ತಿಂಗಳ ಮೂರನೇ ವಾರದಿಂದ ಈ ವರ್ಷದ ಹಜ್ ಪ್ರಂಭವಾಗಲಿದೆ.ದೇಶೀಯ ಯಾತ್ರಿಗಳ ನೋಂದಣಿಯು ಜುಲೈ ಮಧ್ಯದಲ್ಲಿ ಪ್ರಾರಂಭವಾಗಲಿದೆ. ರಂಝಾನ್ ಮಧ್ಯದಲ್ಲಿ ದೇಶೀಯ ಹಜ್ ಪ್ಯಾಕೇಜ್ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಸೌದಿ ಹಜ್ ಉಮ್ರಾ ಸಚಿವಾಲಯ ತಿಳಿಸಿದೆ. ಈ ಹಿಂದೆ ಹಜ್‌ನ ಒಂದು ತಿಂಗಳ ಹಿಂದೆಯಷ್ಟೇ ಪ್ಯಾಕೇಜ್ಗಳನ್ನು ಪ್ರಕಟಿಸಲಾಗುತ್ತಿತ್ತು.
ಮುಂಚಿತವಾಗಿ ಪ್ಯಾಕೇಜುಗಳನ್ನು ಪ್ರಕಟಿಸುವುದರೊಂದಿಗೆ ಸೂಕ್ತ ಪ್ಯಾಕೇಜ್ ಮತ್ತು ಸೇವಾ ಏಜೆನ್ಸಿಗಳನ್ನು ಆಯ್ಕೆ ಮಾಡಲು ಯಾತ್ರಾರ್ಥಿಗಳಿಗೆ ಸದಾವಕಾಶ ಲಭಿಸಲಿದೆ.ಇದಕ್ಕೂ ಮುಂಚಿತವಾಗಿ ಹಿಂದಿನ ವರ್ಷದ ಸೇವಾ ಏಜೆನ್ಸಿಗಳ ಸೇವೆಯ ಕುರಿತಾದ ವರದಿಯನ್ನು ಸಚಿವಾಲಯ ವರದಿ ಮಾಡಲಿದೆ.
ಹಜ್ ಅವಧಿಯಲ್ಲಿ ಲಭಿಸುವ ಸೇವೆಗಳ ಪ್ರಕಾರ ವಿವಿಧ ಶ್ರೇಣಿಯ ಪ್ಯಾಕೇಜುಗಳು ಲಭ್ಯವಿದೆ.ಕಡಿಮೆ ವೆಚ್ಚದ ಹಜ್ ಪ್ಯಾಕೇಜುಗಳನ್ನು ಹೆಚ್ಚಿನವರು ಬಯಸುತ್ತಾರೆ. ಯಾತ್ರಾ ಸೌಕರ್ಯ,ಡೇರೆಗಳನ್ನು ಸ್ಥಾಪಿಸುವುದು ಮುಂತಾದವುಗಳನ್ನು ನೋಂದಾಯಿಸಲು ರಂಝಾನ್ ಒಂದರಿಂದ ಐದರ ವರೆಗೆ ಸರ್ವೀಸ್ ಏಜೆನ್ಸಿ ಗಳಿಗೆ ಅವಕಾಶವನ್ನು ನೀಡಲಾಗುತ್ತದೆ ಎಂದ ಸಚಿವಾಲಯ ತಿಳಿಸಿದೆ.
ಇನ್ನಷ್ಟು ಸುದ್ದಿಗಳು
ಸ್ವತಂತ್ರ ಪ್ಯಾಲಸ್ತೀನ್ ನಿರ್ಮಾಣಗೊಳ್ಳದೆ ಇಸ್ರೇಲ್ ಜೊತೆ ಶಾಂತಿ ಒಪ್ಪಂದಕ್ಕಿಲ್ಲ- ಸೌದಿ ಅರೇಬಿಯಾ
ಸೌದಿ: ಖಾಸಗಿ ವಲಯದಲ್ಲೂ ವಾರದಲ್ಲಿ ಎರಡು ದಿನಗಳ ರಜೆ
ದುಬೈನಲ್ಲಿ ಕೋವಿಡ್ ಹೆಚ್ಚಳ: ಪ್ರವಾಸೋದ್ಯಮ,ಮನರಂಜನೆಗೆ ನಿರ್ಬಂಧ
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು