ಮಂಗಳೂರು: ಮರ್ಹೂಂ ಆತೂರು ಸಈದ್ ಮುಸ್ಲಿಯಾರ್ ರವರ ವ್ಯಕ್ತಿತ್ವವು ಮುಅಲ್ಲಿಂ ಸಮೂಹಕ್ಕೆ ಅತ್ಯಂತ ಮಾದರೀ ಯೋಗ್ಯವಾಗಿದೆ.
ಸಾವಿರಾರು ಮುಅಲ್ಲಿಮರಿಗೆ ಆದರ್ಶ ಪುರುಷರಾಗಿ ಮುಅಲ್ಲಿಮರ ನಡುವೆ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವಿಶೇಷ ಪ್ರೋತ್ಸಾಹ ಬೆಂಬಲ ನೀಡಿ ಬೆಳಸುವುದರಲ್ಲಿ ಅತ್ಯಂತ ಕಾಳಜಿ ವಹಿಸಿದ ಶ್ರೇಷ್ಠ ನಾಯಕರು ಎಂದು ಎಂಇಪಿ ಟ್ರೈನರ್ಸ್ ವಿಂಗ್ ಆಫ್ ಕರ್ನಾಟಕ ಇದರ ಚೆಯರ್ ಮ್ಯಾನ್ ಇಸ್ಮಾಯೀಲ್ ಸ-ಅದಿ ಉರುಮಣೆ ಹೇಳಿದರು.
ಕರ್ನಾಟಕ ರಾಜ್ಯ ಎಂಇಪಿ ಟ್ರೈನರ್ಸ್ ವಿಂಗ್ ಮೆಲ್ಕಾರ್ ಸುನ್ನೀ ಸೆಂಟರ್ ನಲ್ಲಿ ಆಯೋಜಿಸಿದ ಆತೂರು ಉಸ್ತಾದರ ಅನುಸ್ಮರಣಾ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮದ್ರಸ ರಂಗ ಮತ್ತು ಮುಅಲ್ಲಿಮರ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಕಂಡ ಕನಸು ನನಸು ಮಾಡಲು ಪ್ರತಿಯೊಬ್ಬ ಮುಅಲ್ಲಿಮರು ಬದ್ಧರಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಟ್ರೈನರ್ಸ್ ಗಳಾದ ಇಬ್ರಾಹೀಂ ನಈಮಿ ಉರುಮಣೆ,ಅಬೂಬಕರ್ ಲತೀಫಿ ಬೇಂಗಿಲ,ಸಿದ್ದೀಖ್ ಸಅದಿ ಮಿತ್ತೂರು,ಸಿದ್ದೀಖ್ ಮಿಸ್ಬಾಹಿ ಕರೋಪಾಡಿ,ಸಿನಾನ್ ಮದನಿ ಕಲ್ಲಡ್ಕ, ಮತ್ತು ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ಮೊದಲಾದವರು ಆತೂರು ಉಸ್ತಾದರ ವ್ಯಕ್ತಿತ್ವದ ಮತ್ತು ಅವರೊಂದಿಗೆ ಇದ್ದ ಒಡನಾಟದ ಮಧುರ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಉಸ್ತಾದರಿಗಾಗಿ ನಡೆಸಿದ ದ್ಸಿಕ್ರ್ ದುಆ ಕಾರ್ಯಕ್ರಮಕ್ಕೆ ರಫೀಖ್ ಸಅದಿ ಪೇರಿಮಾರ್ ನೇತೃತ್ವ ನೀಡಿದರು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ