ದಮ್ಮಾಮ್: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿ, ದಮ್ಮಾಮ್ ವಲಯ ಸಮಿತಿಯ ಮಹಾಸಭೆಯು ಏಪ್ರಿಲ್, 27 ರಂದು ದಮ್ಮಾಮ್ ಹೋಟೆಲ್ ಹೊಲಿಡೇಸ್ ನಲ್ಲಿ ಅಧ್ಯಕ್ಷರಾದ ಹಾಜಿ ಇಝುದ್ದೀನ್ ಮುಸ್ಲಿಯಾರ ಅಧ್ಯಕ್ಷತೆಯಲ್ಲಿ ಜರಗಿತು.
ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ಉಸ್ತಾದ್ ಫಾರೂಕ್ ಕುಪ್ಪೆಟ್ಟಿಯವರ ಕಿರಾತ್ ನೊಂದಿಗೆ ಆರಂಭಿಸಿದ ಸಭೆಯಲ್ಲಿ ಅಲ್ ಮದೀನಾ ಹಫ್ರ್ ಲ್ ಬಾತಿನ್ ಉಸ್ತಾದ್ ನಜೀಬ್ ಮದನಿ ದುವಾ ನೆರವೇರಿಸಿದರು. ವಲಯ ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಗಣ್ಯರನ್ನು ಸ್ವಾಗತಿಸಿದರು. ವಲಯ ಸಮಿತಿಯ ಹಿರಿಯ ಸಲಹೆಗಾರ ರಾದ ಹಾಜಿ ಏನ್ ಎಸ್ ಅಬ್ದುಲ್ಲಾ, ಅಲ್ ಮದೀನಾ ಪ್ರಾರಂಭಿಕ ಹಂತದಿಂದ ನಡೆದು ಬಂದ ದಾರಿಯನ್ನು ವಿವರಿಸಿ ಉದ್ಘಾಟಿಸಿದರು.ಸಭೆಯಲ್ಲಿ ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಾಮಾದ ಅಧ್ಯಕ್ಷರು,ಖಾಝಿ ಶೈಖುನಾ ಬೇಕಲ್ ಉಸ್ತಾದರನ್ನು ಅಲ್ ಮದೀನಾ ವಲಯ ಸಮಿತಿ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು. ವಲಯ ಸಮಿತಿ ಅಧೀನದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಘಟಕಗಳಾದ ಪ್ರಥಮ ದಮ್ಮಾಮ್ , ದ್ವಿತೀಯ ಜುಬೈಲ್ ಹಾಗೂ ತೃತೀಯ ಹಫ್ರ್ಲ್ ಬಾತಿನ್ ಘಟಕಗಳಿಗೆ ಪ್ರಶಸ್ಸಂನೀಯ ಸ್ಮರಣಿಕೆಗಳನ್ನು ಬೇಕಲ್ ಉಸ್ತಾದರು ವಿತರಿಸಿದರು.
ಗೌರವಾಧ್ಯಕ್ಷರು : ಇಝುದ್ದೀನ್ ಮುಸ್ಲಿಯಾರ್ ,ಅಧ್ಯಕ್ಷರು : ಹಾಜಿ N S ಅಬ್ದುಲ್ಲಾ ಮಂಜನಾಡಿ, ಉಪಾಧ್ಯಕ್ಷರು : T H ಬಶೀರ್ ತೋಟಾಲ್ ,ಉಸ್ಮಾನ್ ಝುಹ್ರಿ, ಕಿನ್ಯ, ಬಾಬಾ ಮಂಜೇಶ್ವರ
ಪ್ರಧಾನ ಕಾರ್ಯದರ್ಶಿ : M.G ಇಕ್ಬಾಲ್ ಮಲ್ಲೂರು, ಸಹ ಕಾರ್ಯದರ್ಶಿ : ರಶೀದ್ ವಳವೂರು ,ಇಸ್ಮಾಯಿಲ್ ಪೊಯ್ಯಲ್ .ಕೋಶಾಧಿಕಾರಿ : ಮೂಸಾ ಹಾಜಿ, ಕಿನ್ಯ
ಸಲಹೆಗಾರರು : ಇಬ್ರಾಹಿಂ ಬಂಟವಾಲ್ ,ಮೊಯ್ದಿನ್ ಹಾಜಿ ಉರುಮನೆ
ಸಂಘಟನಾ ಕಾರ್ಯದರ್ಶಿ : ಮಹಮ್ಮದ್ ಮಲೆ ಬೆಟ್ಟು, ಅಬ್ದುಲ್ ರಹೀಮ್ ಉಚ್ಚಿಲ
ಲೆಕ್ಕ ಪರಿಶೋಧಕರು : ಫಾರೂಕ್ ಕಾಟಿಪಳ್ಳ ಹಾಗೂ 17 ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಲಾಯಿತು.
2019 ರಲ್ಲಿ ನಡೆಯುವ ಅಲ್ ಮದೀನಾ ಸಿಲ್ವರ್ ಜುಬಿಲಿ ಪ್ರಚಾರ ಸಮಿತಿ:
ಚೇರ್ಮ್ಯಾನ್ : ಬಷೀರ್ ತೋಟಾಲ್ ,ವ್ಯೆಸ್ ಚೇರ್ಮ್ಯಾನ್ : ಅಶ್ರಫ್ ಮದಕ ,ಕನ್ವೀನರ್ : ಇಕ್ಬಾಲ್ ಕ್ಯೆರಂಗಳ ,ಅಶ್ರಫ್ ನಾವುಂದ ,ಸಲಹೆಗಾರ : ಖಮರುದ್ದೀನ್ ಗೂಡಿನಬಳಿ.
ಕೊನೆಯಲ್ಲಿ ರಿಸೀವರ್ ಹೈದರ್ ನಯೀಮಿ ಧನ್ಯವಾದ ಸಲ್ಲಿಸಿದರು.