ದುಬೈ: ಯುಎಇ ದೇಶೀಕರಣ(Emiratisation) ಸಂಬಂಧಿಸಿದಂತೆ ಸಣ್ಣ ಉದ್ಯಮ ಸಂಸ್ಥೆಗಳ ಕಳವಳವನ್ನು ಯುಎಇ ಅಧಿಕಾರಿಗಳು ಪರಿಹರಿಸಿದ್ದಾರೆ. 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕೆಂಬ ನಿಯಮವನ್ನು ಸಣ್ಣ ಸಂಸ್ಥೆಗಳಿಗೆ ವಿಸ್ತರಿಸುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.
50ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ಮಾತ್ರ ಸ್ವದೇಶೀಕರಣ ಕಡ್ಡಾಯವಾಗಿದೆ ಎಂದು ಯುಎಇ ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವ( UAE Minister of Human Resources and Emiratisation) ಅಬ್ದುಲ್ ರಹಮಾನ್ ಅಲ್ ಆವಾರ್ ಹೇಳಿದ್ದಾರೆ.ಸಾವಿರಾರು ಇಮಾರಾತಿಗಳು ಈಗಾಗಲೇ ಕೆಲಸಕ್ಕೆ ಸೇರಿದ್ದಾರೆ ಮತ್ತು ಇದು ಯೋಜನೆಯ ಯಶಸ್ಸು ಎಂದು ಸಚಿವರು ಹೇಳಿದರು.
ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ Emiratisation (ದೇಶೀಕರಣ) ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 50 ಕ್ಕಿಂತ ಹೆಚ್ಚು ನುರಿತ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು 2% ಇಮಾರಾತಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ.
1000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು ಕೇವಲ 100 ನುರಿತ ಉದ್ಯೋಗಿಗಳನ್ನು ಹೊಂದಿದ್ದರೆ, ಇಬ್ಬರು ಸ್ಥಳೀಯರನ್ನು ನೇಮಿಸಿಕೊಂಡರೆ ಸಾಕು. ಏತನ್ಮಧ್ಯೆ, 100 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ, 100 ನುರಿತ ಕೆಲಸಗಾರರಾಗಿದ್ದರೆ, ಇಲ್ಲಿಯೂ ಇಬ್ಬರಿಗೆ ಉದ್ಯೋಗ ನೀಡಬೇಕು. ಈ ವರ್ಷಾಂತ್ಯದೊಳಗೆ ಅದನ್ನು ಶೇ.4ಕ್ಕೆ ಏರಿಸಲಾಗುವುದು ಎಂದು ಸಚಿವರು ಸೂಚಿಸಿದರು.
ಮುಕ್ತ ವಲಯದಲ್ಲಿ(Free Zone) ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಸ್ವದೇಶೀಕರಣವನ್ನು ಜಾರಿಗೊಳಿಸಲಾಗಿಲ್ಲ. ಅದೇ ಸಮಯದಲ್ಲಿ, ಹಲವಾರು ಸಂಸ್ಥೆಗಳು ಇದನ್ನು ಸ್ವ ಇಚ್ಛೆಯಿಂದ ತೆಗೆದುಕೊಂಡಿವೆ ಎಂದು ಎಮಿರೇಟಿ ಟ್ಯಾಲೆಂಟ್ ಸ್ಪರ್ಧಾತ್ಮಕ ಮಂಡಳಿಯ ಪ್ರಧಾನ ಕಾರ್ಯದರ್ಶಿ ಘನ್ನಮ್ ಅಲ್ ಮಝ್ರೂಯಿ (Ghannam Al Mazrouei, Secretary-General of the Emirati Talent Competitiveness Council) ಹೇಳಿದರು.
1600 ಇಮಾರಾತಿಗಳು ಫ್ರೀ ಝೋನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಮುಕ್ತ ವಲಯ ಸಂಸ್ಥೆಗಳು ಮುಂದೆ ಬರಬೇಕು. ಅಂತಹ ಸಂಸ್ಥೆಗಳಿಗೆ ‘Nafis’ ಯೋಜನೆಯಡಿಯಲ್ಲಿ ಪ್ರಯೋಜನಗಳು ಲಭಿಸಲಿದೆ ಎಂದು ಸಲಹೆ ನೀಡಿದರು.