janadhvani

Kannada Online News Paper

ನೌಶಾದ್ ಹಾಜಿ ಸುರಲ್ಪಾಡಿ ವಿಯೋಗ- ಕೆಸಿಎಫ್ ಕುವೈಟ್ ಸಂತಾಪ

ಕುವೈಟ್ ಸಿಟಿ: ದಕ್ಷಿಣ ಕನ್ನಡ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾಗಿ, ನಂಡೊ ಪೆಂಙಳ್ ಅಭಿಯಾನದ ಸ್ಥಾಪಕಧ್ಯಕ್ಷರಾಗಿ ಹಲವಾರು ಬಡಕುಟುಂಬದ ಹೆಣ್ಣು ಮಕ್ಕಳ ಜೀವನಕ್ಕೆ ಆಸರೆಯಾಗಿ ಹಾಗೂ ಹಲವಾರು ಧಾರ್ಮಿಕ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ, ಉಲಮಾ ಪಂಡಿತರ ಪ್ರೀತಿ ಪಾತ್ರರಾದ ಶಾಂತ ಸ್ವಭಾವದ ನಗು ಮುಖದ ವ್ಯಕಿತ್ವ ನೌಶಾದ್ ಹಾಜಿ ಸುರಲ್ಪಾಡಿ ಅವರು ಅಲ್ಲಾಹುವಿನ ಅನುಲಂಘನೀಯ ಕರೆಗೆ ಓ ಗೊಟ್ಟು ಇಹಲೋಕ ತ್ಯಜಿಸಿರುವುದು ಸಮುದಾಯಕ್ಕೆ ತುಂಬಲಾರದ ನಷ್ಟ.

ಇವರ ವಿಯೋಗಕ್ಕೆ ಕೆಸಿಎಫ್ ಕುವೈಟ್ ಸಂತಾಪ ಸೂಚಿಸಿದೆ. ಇವರ ಸಮಾಜಮುಖಿ ಕಾರ್ಯಗಳು ಸಮಾಜಕ್ಕೂ ಸಮುದಾಯಕ್ಕೂ ಮಾದರಿಯಾಗಲಿ, ಕುಟುಂಬದವರಿಗೆ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಅಲ್ಲಾಹನು ನೀಡಲಿ ಆಮೀನ್
ಎಂದು KCF ಕುವೈಟ್ ನಾಯಕರು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com