ಮಹಾರಾಷ್ಟ್ರ ನಾಂದೇಡ್ ಸಿಟಿಯಲ್ಲಿ ಸುಮಾರು 200 ರಷ್ಟು ಮಸೀದಿಗಳಲ್ಲಿ ಸುಮಾರು 50 ಮಸೀದಿಗಳು ಮಾತ್ರ ಅಹ್ಲುಸುನ್ನಃದ ಆದರ್ಶದಲ್ಲಿ ಕಾರ್ಯಚರಿಸುತ್ತಿದೆ. ಉಳಿದವುಗಳು ನೂತನವಾದಿಗಳ ಕೇಂದ್ರವಾಗಿ ಮಾರ್ಪಟ್ಟಿದೆ.
ಸುಮಾರು 850 ವರ್ಷಗಳ ಇಸಹಾಸವಿರುವ
ಹಝ್ರತ್ ಶಾಯೇ ಕಾಮಿಲ್ ದಾದ ರಹ್ಮತುಲ್ಲಾಹ್ (ಖುತುಬೇ ನಾಂದೇಡ್) ರವರ ದರ್ಗಾದ ಪರಿಸರದಲ್ಲಿ ಸಂಗಮಿಸಿದ
ಮಹಾರಾಷ್ಟ್ರ ಸ್ಟೇಟ್’ ಸುನ್ನಿ ಜಂಇಯತುಲ್ ಮುಅಲ್ಲಿಮೀನ್ SJM ಇದರ ಸ್ಟೇಟ್ ಪ್ರತಿನಿಧಿ ಸಮ್ಮೇಳನ ಕಳೆದ ವರ್ಷನಡೆದಿತ್ತು. ಈ ವೇಳೆ, ಅಲ್ಲಿನ ಉಲಮಾ, ಉಮರಾಗಳು ಒಕ್ಕೊರಲಿನ ತೀರ್ಮಾನದಂತೆ ಗತಕಾಲದ ಅಹ್ಲುಸುನ್ನದ ವೈಭವವನ್ನು ಮರಳಿ ಪಡೆಯಲು ಬೇಕಾದ ಎಲ್ಲಾ ರೀತಿಯ ಕೆಲಸ ಕಾರ್ಯಕ್ಕೆ ಮುಂದಾಗಿ ಅದರ ಪ್ರಥಮ ಹಂತವಾಗಿ ತೈಬಾ ಎಜುಕೇಶನಲ್ ಸೆಂಟರ್ ಎಂಬ ಹೆಸರಿನೊಂದಿಗೆ ಮೊಡೆಲ್ ಮದ್ರಸ 1/1/23 ರಂದು ಚಾಲನೆ ನೀಡಲಾಯಿತು.
ಇಂಗ್ಲಿಷ್ ಮೀಡಿಯಂ ಸ್ಕೂಲ್ , ದ’ಅ್ ವಾ ಕಾಲೇಜು ,ಮಹಿಳಾ ಶರೀಅತ್, ಮೊಹಲ್ಲ ಮದ್ರಸಗಳು ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ 3 ದಿನಗಳಲ್ಲಿ ನಡೆದ ನಾಂದೇಡ್ ಜಿಲ್ಲಾ ಮಟ್ಟದ ಟ್ರೈನಿಂಗ್ ಕ್ಯಾಂಪ್’ ಉಲಮಾಗಳಿಂದ ತುಂಬಿ ತುಳುಕಿತ್ತು .
ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾ (IEB) ನ್ಯಾಷನಲ್ ಟ್ರೈನೆರ್, ಅಸ್ಸುನ್ನಃ ಎಜು & ಚಾರಿಟಿ ಇದರ ಚೇರ್ಮನ್ ಉವೈಸಿ ಮನ್ಝರಿ ಹುಬ್ಬಳ್ಳಿಯವರು ನೇತ್ರತ್ವದಲ್ಲಿ ನಡೆದ ಟ್ರೇನಿಂಗ್ ಕ್ಯಾಂಪ್ ಆವೇಶಭರಿತವಾಗಿತ್ತು.
ಮೂರು ದಿನಗಳಲ್ಲಿ ನಡೆದ ಕ್ಯಾಂಪ್’ನ ಫಲವಾಗಿ ಅಲ್ಲಿ ಸೇರಿದ ಎಲ್ಲಾ ಉಲಾಮಾಗಳು ತಮ್ಮ ಮೊಹಲ್ಲಗಳಲ್ಲಿ IEB ಸಿಲೆಬಸ್ ಅನುಸಾರ ಮದ್ರಸ ಆರಂಭಿಸುವ ಪ್ರತಿಜ್ಞೆ ಕೈಗೊಂಡಿದ್ದಾರೆ.
ಈ ಎಲ್ಲಾ ಕಾರ್ಯಗಳು ನಾಂದೇಡ್ ಜಿಲ್ಲಾ ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಅಧೀನದಲ್ಲಿ ,ದಾರುಲ್ ಹಬೀಬ್ ರಾಜಾಪೂರ್ ಸಾರಥಿ ಮೌಲಾನ ಮುಫ್ತಿ ಶರೀಫ್ ನಿಝಾಮಿ ರಾಜಾಪೂರ್ ಮೇಲ್ನೋಟದಲ್ಲಿ ಮೌಲಾನ ಉವೈಸ್ ಮನ್ಝರಿ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು.
✍️ಹನೀಫ್ ಸಖಾಫಿ ಹುಬ್ಬಳ್ಳಿ

















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ