ಮದೀನಾ ಮುನವ್ವರ : ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಮದೀನಾ ಮುನವ್ವರ ಯುನಿಟ್ ವತಿಯಿಂದ ಆತ್ಮೀಯ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ ಮದೀನಾ ಮುನವ್ವರದಲ್ಲಿ ನಡೆಯಿತು.
ಅಲ್ ಮದೀನ, ಮದೀನ ಮುನವ್ವರ ಯುನಿಟ್ ಅಧ್ಯಕ್ಷರಾದ ಉಮರ್ ಫಾರೂಕ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದೀನ ಮುನವ್ವರ ಝೋನ್ ಅಧ್ಯಕ್ಷರಾದ ಮುಹಮ್ಮದ್ ಮುಸ್ತಫ ಲತೀಫಿ ಕಲ್ಕಟ್ಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್
ಜನರಲ್ ಮ್ಯಾನೇಜರ್ ಖಾದರ್ ಸಖಾಫಿ ಉಸ್ತಾದರು ಆತ್ಮೀಯ ಮಜ್ಲಿಸ್ ಗೆ ನೇತೃತ್ವ ವಹಿಸಿ ದುವಾ ನಡೆಸಿದರು.
ಬಳಿಕ ಝೋನ್ ವತಿಯಿಂದ ಉಸ್ತಾದ್ ಅವರಿಗೆ ಕೋಟು ಹೊದಿಸಿ ಸನ್ಮಾನಿಸಲಾಯಿತು.ಈ ವೇಳೆ ಸಫ್ವಾನ್ ಸಖಾಫಿ,ಅಬ್ದುಲ್ ರಹ್ಮಾನ್(ಅಬ್ಬೊನ್ ಹಾಜಿ) ಹಾಜಿ ತಬೂಕ್, ಹಮೀದ್ ಮುಸ್ಲಿಯಾರ್ ತಬೂಕ್, ಇಕ್ಬಾಲ್ ಸಅದಿ ಯಾಂಬೊ , ಹೈದರ್ ಪಡಿಕಲ್, ಅಬ್ದುಲ್ ಖಾದರ್ ಕಣ್ಣಂಗಾರ್, ತಾಜುದೀನ್ ಮದೀನ, ಅಶ್ರಫ್ ಹಾಜಿ ಕಿನ್ಯ,
ಉಮರ್ ಕಾಯರ್ ಮದೀನ ಮತ್ತಿತರರು ಉಪಸ್ಥಿತರಿದ್ದರು.
ಅಲ್ ಮದೀನಾ ಮಂಜನಾಡಿ ಸೌದಿ ಅರೇಬಿಯಾ ಆರ್ಗನೈಸರ್ ಹೈದರ್ ಅಲಿ ನಈಮಿ ಸ್ವಾಗತಿಸಿದರು.