ರಿಯಾದ್: ಸೌದಿ ಅರೇಬಿಯಾದಲ್ಲಿ(Saudi Arabia), ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವ್ಯಕ್ತಿಗಳಿಗೆ ವಿಧಿಸಲಾದ 10,000 ರಿಯಾಲ್‌ಗಳ ದಂಡವನ್ನು 15 ದಿನಗಳಲ್ಲಿ ಪಾವತಿಸುವಂತೆ ಅಂತಿಮ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ, ಕುಂದುಕೊರತೆಗಳ ಮಂಡಳಿಯಲ್ಲಿ (Diwan Al Madhalim) ಪ್ರಕರಣ ದಾಖಲಿಸಲಾಗುವುದು ಎಂದು ರಾಷ್ಟ್ರೀಯ ಉಲ್ಲಂಘನೆಗಳ ವೇದಿಕೆ National Violations Forum (ifaa) ಎಚ್ಚರಿಸಿದೆ.
ಕಳೆದೆರಡು ದಿನಗಳಿಂದ 10,000 ರಿಯಾಲ್ ದಂಡ ಪಡೆದವರು ಕೂಡಲೇ ಪಾವತಿಸುವಂತೆ ಮೊಬೈಲ್ ಗೆ ಸಂದೇಶ ಬರುತ್ತಿದೆ. ಇದೇ ವೇಳೆ, ದಂಡದ ಸಂದೇಶವನ್ನು ಪಡೆದವರು ಸುಮಾರು ಮೂರು ವರ್ಷಗಳಿಂದ ಪಾವತಿಸಲು ಸಾಧ್ಯವಾಗದ ದಂಡವನ್ನು 15 ದಿನದಲ್ಲಿ ಹೇಗೆ ಪಾವತಿಸುವುದು ಎಂಬ ಚಿಂತೆಯಲ್ಲಿದ್ದಾರೆ.
ಹತ್ತು ಸಾವಿರ ರಿಯಾಲ್ (Ten Thousands Riyal) ದಂಡ ಪಡೆದವರಿಗೆ ಮಾತ್ರ ಸದ್ಯಕ್ಕೆ ಸಂದೇಶ ಬರುತ್ತಿದ್ದು,1,000 ರಿಯಾಲ್ ದಂಡವಿರುವವರಿಗೆ ಸಂದೇಶ ಇನ್ನೂ ತಲುಪಿಲ್ಲ. ಈ ಸಂದೇಶ ಬಂದ 15 ದಿನಗಳೊಳಗೆ ನಿಗದಿತ ಬಿಲ್ ನಂಬರ್ ಮೂಲಕ ಹತ್ತು ಸಾವಿರ ರಿಯಾಲ್ ಪಾವತಿಸಬೇಕು ಮತ್ತು ಇದನ್ನು ಅಂತಿಮ ಎಚ್ಚರಿಕೆ ಎಂದು ಪರಿಗಣಿಸಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಕೋವಿಡ್ ಅವಧಿಯಲ್ಲಿ, ಮಾಸ್ಕ್ ಧರಿಸದಿರುವುದು ಮತ್ತು ಪರವಾನಗಿ ಇಲ್ಲದೆ ಹೊರಗೆ ಹೋಗುವುದು ಮುಂತಾದ ಉಲ್ಲಂಘನೆಗಳಿಗೆ ದಂಡವನ್ನು ವಿಧಿಸಲಾಗಿತ್ತು. ಆದರೆ, ಅಂದು ದಂಡದ ಸಂದೇಶ ಬಂದಿದ್ದರೂ ಇಖಾಮ ನವೀಕರಿಸಲು ಅಥವಾ ರೀ ಎಂಟ್ರಿ ಮತ್ತು ಫೈನಲ್ ಎಕ್ಸಿಟ್ ಗೆ ಯಾವುದೇ ಅಡ್ಡಿಯಾಗಲಿಲ್ಲ. ಈ ಕಾರಣದಿಂದಾಗಿ ಹಲವರು ದಂಡ ಪಾವತಿಸಿರಲಿಲ್ಲ.
ಕೋವಿಡ್ ಹರಡುವಿಕೆ ಮುಗಿದ ನಂತರ ಮತ್ತು ಷರತ್ತುಗಳನ್ನು ಹಿಂಪಡೆದ ನಂತರ ಈ ದಂಡವನ್ನು ಮನ್ನಾ ಮಾಡಲಾಗುವುದು ಎಂಬುದು ಹಲವರ ನಿರೀಕ್ಷೆಯಾಗಿತ್ತು. ಆದರೆ, ಇದೀಗ ಅಂತಿಮ ಎಚ್ಚರಿಕೆ ಬಂದಿರುವುದರಿಂದ ಎಲ್ಲರೂ ಆತಂಕಕ್ಕೊಳಗಾಗಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ