janadhvani

Kannada Online News Paper

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್- ದಮ್ಮಾಂ ವಲಯ ನೇತ್ರತ್ವದಲ್ಲಿ ಸನ್ಮಾನ ಸಮಾರಂಭ

ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಡಿಕೆಯಸ್ಸಿ ಇದರ ಅಧೀನದ ದಮ್ಮಾಂ ವಲಯದ ನೇತ್ರತ್ವದಲ್ಲಿ ಸನ್ಮಾನ ಸಮಾರಂಭ ಕಾರ್ಯಕ್ರಮವು ಡಿ.18 ರಂದು ಬಹಳ ವಿಜೃಂಭಣೆಯಿಂದ ಜುಬೈಲ್ ನಲ್ಲಿ ಜರಗಿತು.ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಡಿಕೆಯಸ್ಸಿ ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನ್ ಕಾರ್ಯಾಧ್ಯಕ್ಷರಾದ ಬಹು! ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರು ಉದ್ಘಾಟಿಸಿದರು. ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್ ಖಿರಾಅತ್ ಪಠಿಸಿದರು. ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಸ್ವಾಗತಿಸಿದರು.ಡಿಕೆಯಸ್ಸಿ ಜಿಲ್ಲಾಧ್ಯಕ್ಷ ಹಾಗೂ ಮರ್ಕಝ್ ಕಾರ್ಯಾಧ್ಯಕ್ಷ ಬಹುಮಾನ್ಯ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್, ಭಾರತ ಸರ್ಕಾರದ ಪದ್ಮಶ್ರೀ ವಿಜೇತ, ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಮಾಜಿ ಮೇಯರ್ ಅಬ್ದುಲ್ ಅಝೀಝ್ ರವರನ್ನು ಪುಷ್ಪ ಗುಚ್ಛ ಹಾಗೂ ಶಾಲು ಹೊದಿಸಿ ಗೌರವಯುತ ವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಡಿಕೆಯಸ್ಸಿಯ ಡೋಕುಮೆಂಟರಿಯಲ್ಲಿ ಅಕ್ಷರ ಸಂತ ಹಾಜಬ್ಬ ರವರು ತನ್ನ ಊರಿನಲ್ಲಿ ಶಾಲೆಯನ್ನು ಕಟ್ಟಿ ಭಾರತ ಸರ್ಕಾರದ ರಾಷ್ಟ್ರ ಪತಿಯವರಿಂದ ಪದ್ಮಶ್ರೀ ಪುರಸ್ಕಾರ ಲಭಿಸಿದ, ಅವರಿಗೆ ವಿದ್ಯಾಭ್ಯಾಸಗೊಂದಿಗಿರುವ ಶಿಕ್ಷಣಪ್ರೇಮವನ್ನು ಎತ್ತಿ ತೋರಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಸ್ಥಾಪಕ ಸದಸ್ಯ ಹಾಗೂ ಜಿಲ್ಲಾ ಸಮಿತಿ ಕೋಶಾಧಿಕಾರಿ ಝೈನುದ್ದೀನ್ ಪುತ್ತೂರು, ಕೇಂದ್ರ ಸಮಿತಿ ಕೋಶಾಧಿಕಾರಿ ದಾವೂದು ಕಜೆಮಾರ್, ಮುಹಮ್ಮದ್ ಕಮ್ಮರಡಿ,ಹಾರಿಸ್ ದರ್ಬೆ, ಶರೀಫ್ ಕಳಸ ಸಾಮ್ ಕೋನ್, ಅಬ್ದುಲ್ ಅಝೀಝ್ ಸಅದಿ ಕುಡ್ತೆಮುಗೇರ್, ಪಿ.ಎಚ್. ಇಸ್ಮಾಯೀಲ್ ಉಸ್ತಾದ್, ಸಭೆಯಲ್ಲಿ ಹಾಜರಿದ್ದರು.
ಡಿಕೆಯಸ್ಸಿ ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಕಾಪು, ಕೇಂದ್ರ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ಆಡಿಟರ್ ಇಸ್ಮಾಯೀಲ್ ಹೊಸಂಗಡಿ, ಹಾತಿಂ ಕೂಳೂರು, ಜುಬೈಲ್ ಘಟಕದ ಅಧ್ಯಕ್ಷ ಫಾರೂಖ್ ಕರ್ನಿರೆ, ದಮ್ಮಾಂ ಅಧ್ಯಕ್ಷ ಅಬೂಬಕ್ಕರ್ ಅಜಿಲಮೊಗರು, ಅಲ್ ಖೋಬರ್ ಅಧ್ಯಕ್ಷ ಅಬ್ದುರ್ರಶೀದ್ ಬೆಳ್ಳಾರೆ,ಅಲ್ ಮುಝೈನ್ ಮುಹಮ್ಮದ್ ಅಲೀ,ಅಲ್ ಹಸ್ಸಾ ಪ್ರ. ಕಾರ್ಯದರ್ಶಿ ಅಬ್ದುಲ್ ಹಕೀಂ ನೆಕ್ಕರೆ, ಸಿದ್ದೀಖ್ ಕಲ್ಲಡ್ಕ,ಅಬ್ದುಲ್ ಕರೀಂ ಪಾಣೆಮಂಗಳೂರು, ಮುಹಮ್ಮದ್ ಅಲೀ ಉಪ್ಪಿನಂಗಡಿ ಗಲ್ಫ್ ಬೇಕರಿ, ಅಶ್ರಫ್ ನಾವುಂದ, ಉಮರ್ ಮರವೂರು, ಜುಬೈಲ್ ಯೂತ್ ವಿಂಗ್ ಸದಸ್ಯರು ಸಮಾರಂಭದ ಯಶಸ್ವಿಗೆ ಕಾರಣಕರ್ತರಾದರು.ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ಗಫೂರ್ ಸಜಿಪ ಮತ್ತು ಸಫೀರ್ ರವರು ಪ್ರೋಗ್ರಾಂ ಬಿತ್ತರಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು.
ಇಖ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಜನಾಬ್ ಅಬ್ದುಲ್ ಹಮೀದ್ ಉಳ್ಳಾಲ ಧನ್ಯವಾದ ಗೈದರು.ಡಿಕೆಯಸ್ಸಿ ನಡೆಸುವ ಅಲ್ ಇಹ್ಸಾನ್ ಶಿಕ್ಷಣ ಕೇಂದ್ರದ ವಿದ್ಯಾಲಯದ ಬಗ್ಗೆ ಪದ್ಮಶ್ರೀ ವಿಜೇತ, ಅಕ್ಷರ ಸಂತ ಹಾಜಬ್ಬ ರವರಿಂದ
ಶಿಕ್ಷಣ ದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಹೆಚ್ಚಿನ ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆ ಇದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಬಹುಮಾನ್ಯ ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಸಲಹೆ ನೀಡಿದರು.ಪವಿತ್ರ ಮಕ್ಕಾದಲ್ಲಿ ಉಮ್ರಾ ಹಾಗೂ ಮದೀನಾದಲ್ಲಿ ರೌಳ ಝಿಯಾರತ್ ನಿರ್ವಹಿಸುವ ಮಹಾ ಸೌಭಾಗ್ಯ ಒದಗಿಸಿದ ಡಿಕೆಯಸ್ಸಿಗೆ ನಾನು ಅಭಾರಿಯಾಗಿದ್ದೇನೆ. ಇದಕ್ಕಾಗಿ ಶ್ರಮಿಸುವ ತಮಗೆಲ್ಲರಿಗೂ ಅಲ್ಲಾಹು ಖೈರ್, ಆಫಿಯತ್, ಆಯುರಾರೋಗ್ಯ, ಸುಖ, ಹಲಾಲ್ ಆದ ಸಂಪತ್ತು, ನೆಮ್ಮದಿ ನೀಡಿ ಅನುಗ್ರಹಿಸಲಿ ಎಂದು ಸನ್ಮಾನ ಸ್ವೀಕರಿಸಿ ಪದ್ಮಶ್ರೀ ಹಾಜಬ್ಬ ರವರು ಹಾರೈಸಿದರು.ವರದಿ: ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಮ್

error: Content is protected !! Not allowed copy content from janadhvani.com