ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ಮದನಿ ತಂಙಳ್ ಉಜಿರೆ ಆಯ್ಕೆಯಾದರು.ನಗರದ ಸೂರ್ಯ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ವಾರ್ಷಿಕ ಕೌನ್ಸಿಲ್ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಯವರನ್ನು ಆಯ್ಕೆಮಾಡಲಾಯಿತು.ಸಮಿತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ನಡೆಸಿ,ಸಂಘಟನಾ ವಿಭಾಗದ ಉಪಾಧ್ಯಕ್ಷರಾಗಿ ಕೆ ಕೆ ಮುಹಿಯ್ಯುದ್ಧೀನ್ ಕಾಮಿಲ್ ಸಖಾಫಿ ಕೃಷ್ಣಾಪುರ, ಕ್ಷೇಮ ಕಾರ್ಯ ವಿಭಾಗದ ಉಪಾಧ್ಯಕ್ಷರಾಗಿ ಎ ಕೆ ಅಹ್ಮದ್ ಬೆಳ್ತಂಗಡಿ, ಸಾರ್ವಜನಿಕ ಸಂಪರ್ಕ ವಿಭಾಗದ ಉಪಾಧ್ಯಕ್ಷರಾಗಿ ಯೂಸೂಫ್ ಹಾಜಿ ಚಿಕ್ಕಮಗಳೂರು ಇವರನ್ನು ಆಯ್ಕೆ ಮಾಡಲಾಯಿತು.ವಾರ್ಷಿಕ ಕೌನ್ಸಿಲ್ ಸಭೆಯನ್ನುಅಬ್ದುಲ್ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ
ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಿದರು.
ಕಾರ್ಯದರ್ಶಿಗಳಾದ ಎಂ.ಬಿ ಮುಹಮ್ಮದ್ ಸಾದಿಕ್ ಮಾಸ್ಟರ್ ವಾರ್ಷಿಕ ವರದಿಯನ್ನು, ಎನ್ ಎಸ್ ಉಮರ್ ಮಾಸ್ಟರ್ ವಾರ್ಷಿಕ ಲೆಕ್ಕಪತ್ರವನ್ನು, ಇಸ್ಮಾಯಿಲ್ ಸಅದಿ ಉರುಮಣೆ ವಾರ್ಷಿಕ ಬಜೆಟ್ ಹಾಗೂ ಕೆ.ಕೆ.ಎಂ. ಕಾಮಿಲ್ ಸಖಾಫಿ ವಾರ್ಷಿಕ ಕಾರ್ಯಯೋಜನೆಗಳನ್ನು ಮಂಡಿಸಿದರು. ವಾರ್ಷಿಕ ಕೌನ್ಸಿಲ್ ವೀಕ್ಷಕರಾಗಿ ಎಸ್ ಎಂ ಎ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾರಾಯಮಂಗಲಂ ಅಬ್ದುಲ್ ರಹ್ಮಾನ್ ಫೈಝೀ ಭಾಗವಹಿಸಿ ಸಂಘಟನೆಯ ಕಾರ್ಯಾಚರಣೆಯ ಬಗ್ಗೆ ಮಾಹಿತಿಗಳನ್ನು ನೀಡಿದರು.
ಪ್ರಾರಂಭದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಸ್ವಾಗತಿಸಿ, ಕೊನೆಯಲ್ಲಿ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಮದನಿ ಪೂಡಲ್ ಧನ್ಯವಾದಗೈದರು. ವೇದಿಕೆಯಲ್ಲಿ ಇಬ್ರಾಹಿಂ ಹಾಜಿ ಶಿವಮೊಗ್ಗ, ಮನ್ಸೂರ್ ಹಾಜಿ ಉಡುಪಿ, ಎ.ಪಿ.ಇಸ್ಮಾಯಿಲ್ ಅಡ್ಯಾರ್ ಪದವು, ಯೂಸೂಫ್ ಹಾಜಿ ಚಿಕ್ಕಮಗಳೂರು, ಮುಫತ್ತಿಶ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಓ.ಕೆ. ಸಈದ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.