ಕರ್ನಾಟಕ ಕಲ್ಚರಲ್ ಫೌಂಡೇಷನ್
KCF ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಇದರ ಅಧೀನದಲ್ಲಿ ನಡೆಸಲ್ಪಡುವ
*ಸ್ವಾಲಿಹಾ ಮಹಿಳಾ ಅಕಾಡೆಮಿ* ಇಸ್ಲಾಮಿಕ್
ತರಗತಿಗೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಮಟ್ಟದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಸಯ್ಯದ್ ಆಬಿದ್ ತಂಙಳ್ ಅಲ್ ಹೈದ್ರೋಸಿ ಇವರ ಉದ್ಘಾಟನೆ ಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನಿಝ್ವಾ ಝೋನ್ ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಬಹು ಉಬೈದುಲ್ಲಾ ಸಖಾಫಿ ಮಿತ್ತೂರು ಇವರು ಪೋಸ್ಟರ್ ಬಿಡುಗಡೆ ಗೊಳಿಸಿ ಪ್ರಪ್ರಥಮ ಬ್ಯಾಚ್ ಗೆ ತರಗತಿ ನೀಡಲಾಯಿತು.
KCF ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್ , ಸಲಾಮ್ ಮದನಿ ಉಸ್ತಾದ್, KCF ಒಮಾನ್ ಸಂಘಟನಾ ಕಾರ್ಯದರ್ಶಿ ಸಫ್ವಾನ್, KCF ನಿಝ್ವಾ ಝೋನ್ ಅಧ್ಯಕ್ಷ
ಜನಾಬ್ ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ , ಆಡಳಿತ ವಿಭಾಗದ ಕಾರ್ಯದರ್ಶಿ ವಾರಿಸ್ ಮಣಿಪುರ,
ಹಾಗೂ KCF ಒಮಾನ್ ರಾಷ್ಟ್ರೀಯ ನಾಯಕರು , KCF ನಿಝ್ವಾ ಝೋನ್ ಮತ್ತು ಫರ್ಕ್ ಸೆಕ್ಟರ್ ನ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
KCF ಒಮಾನ್ ಸಾಂತ್ವನ ವಿಭಾಗದ ಅಧ್ಯಕ್ಷ ಕಲಂದರ್ ಬಾಷ ತೀರ್ಥಹಳ್ಳಿ ಸ್ವಾಗತಿಸಿ ನಿಝ್ವಾ ಝೋನ್ ಕೋಶಾಧಿಕಾರಿ ಸಿರಾಜ್ ಅರಿಮಳ ಇವರು ವಂದಿಸಿದರು.