ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ) ಎಸ್‌ವೈಎಸ್ 30ನೇ ವರ್ಷಾಚರಣೆಯ ಪ್ರಯುಕ್ತ ವಿವಿಧ ಕಾರ್ಯಯೋಜನೆಗಳನ್ನು ರಾಜ್ಯ ಸಮಿತಿಯು ಸಿದ್ಧ ಪಡಿಸಿದ್ದು,ಇದರ ಯಶಸ್ವಿಗಾಗಿ ಬ್ರಾಂಚ್ ಸಮಿತಿಗಳನ್ನು ಸಜ್ಜುಗೊಳಿಸಲು ಎಸ್ ವೈ ಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ಸೆಂಟರ್ ಮಟ್ಟದಲ್ಲಿ ಬ್ರಾಂಚ್ ಪದಾಧಿಕಾರಿಗಳಿಗಾಗಿ ಬ್ರಾಂಚ್ ಎಂಪೊ@30 ಎಂಬ ಸಮಾವೇಶವನ್ನು ಜಿಲ್ಲೆಯ 20 ಸೆಂಟರುಗಳಲ್ಲಿ 2022 ರ ಡಿಸೆಂಬರ್ 15 ರಿಂದ 31 ರ ವರಗೆ ಆಯೋಜಿಸಲಿದೆ.
ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಬ್ರಾಂಚುಗಳು ಕಾರ್ಯಚರಿಸುತ್ತಿದ್ದು, ಅವುಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ಅಭಿಯಾನದ ಉದ್ಧೇಶವಾಗಿದೆ. ಜಿಲ್ಲಾ ನಾಯಕರು ವಿವಿಧ ತಂಡಗಳಾಗಿ ಸೆಂಟರ್ ಮಟ್ಟದಲ್ಲಿ ಆಯೋಜಿಸುವ ಈ ಸಮಾವೇಶಗಳಲ್ಲಿ ನೇತೃತ್ವ ನೀಡಲಿದ್ದಾರೆ.
ಸಮಾವೇಶದಲ್ಲಿ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಬ್ರಾಂಚ್ ಪದಾಧಿಕಾರಿಗಳು ಪ್ರತಿನಿಧಿಗಳಾಗಿರುವರು.
ಜಿಲ್ಲೆಯ 20 ಸೆಂಟರುಗಳಲ್ಲಿ ನಡೆಯುವ ಕಾರ್ಯಕ್ರಮದ ದಿನಾಂಕಗಳನ್ನು ಜಿಲ್ಲಾ ಸಮಿತಿಯು ಪ್ರಕಟಿಸಿದೆ.ಎಲ್ಲಾ ಸೆಂಟರ್ ಸಮಿತಿಗಳು ಸಮಾವೇಶವನ್ನು ಆಯೋಜಿಸಿ ,ಯಶಸ್ವಿಗೊಳಿಸುವಂತೆ ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಅಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.