ಕಿನ್ಯಾ : ಸುಲ್ತಾನುಲ್ ಆರಿಫೀನ್ ಅಶ್ಶೈಖ್ ಅಹ್ಮದುಲ್ ಕಬೀರ್ ಅರ್ರಿಫಾಈ ರವರ ಸಂಸ್ಮರಣೆ ಪ್ರಯುಕ್ತ ಕಿನ್ಯ ಬದ್ರಿಯ್ಯಾನಗರ ಬುಖಾರಿ ಜುಮುಅ ಮಸ್ಜಿದ್ ನಲ್ಲಿ ರಿಫಾಈ ರಾತೀಬ್ ಮಜ್ಲಿಸ್ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಪ್ರಾರಂಭದಲ್ಲಿ ಸಯ್ಯಿದ್ ಅಲವಿ ತಂಙಳ್ ರವರು ಪ್ರಾರ್ಥನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ ರಿಫಾಈ ರಾತೀಬ್ ಮಜ್ಲಿಸ್ ನ ಸಮಾರೋಪ ಪ್ರಾರ್ಥನೆಗೆ ಹಿರಿಯ ವಿದ್ವಾಂಸ,ಸೂಫಿವರ್ಯ,ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲೀ ಬಾಫಖೀಅ್ ತಂಙಳ್ ಕೊಯಿಲಾಂಡಿ ನೇತೃತ್ವ ನೀಡಿದರು.
ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸ್ಥಳೀಯ ಖತೀಬ್ ಅಬೂಬಕರ್ ಸಿದ್ದೀಖ್ ಫಾಳಿಲಿ ಉದ್ಘಾಟಿಸಿದರೆ ಅಶ್ರಫ್ ಸಅದಿ ಮಲ್ಲೂರು ಸಂದೇಶ ಭಾಷಣ ನಡೆಸಿದರು.
ಸಯ್ಯಿದ್ ನಿಝಾಮುದ್ದೀನ್ ಬಾಫಖೀಅ್ ತಂಙಳ್,ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ, ಎಸ್.ವೈ.ಎಸ್ ರಾಜ್ಯ ಸಮಿತಿ ನಾಯಕ ಸಿದ್ದೀಖ್ ಕೆ.ಎಂ ಮೋಂಟುಗೋಳಿ,ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಕೋಶಾಧಿಕಾರಿ ಸಾದುಕುಂಞಿ ಹಾಜಿ ಸಾಗ್,ಎಸ್.ವೈ.ಎಸ್ ಕಿನ್ಯ ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ, ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ, ಬುಖಾರಿ ಜುಮುಅ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್, ಇಝ್ಝುದ್ದೀನ್ ಅಹ್ಸನಿ, ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ನಾಯಕ ಎಂ.ಕೆ.ಎಂ ಇಸ್ಮಾಈಲ್ ಕಿನ್ಯ, ಉದ್ಯಮಿ ಅಬ್ಬಾಸ್ ಹಾಜಿ ಎಲಿಮಲೆ, ಬಷೀರ್ ಹಾಜಿ ಪನೀರ್, ರಿಯಾಝ್ ಶುಭಾಸ್ ನಗರ, ಇಸ್ಮಾಈಲ್ ಮದನಿ ಮೊರೋಕ್ಕೊ, ನೂರುಲ್ ಉಲಮಾ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಅದಿ, ಎಸ್.ಎಂ.ಎ ನಾಯಕ ಬಾವುಚ್ಚ ಮಂಜನಾಡಿ,ಅಶ್ರಫ್ ಇಂದಾದಿ, ಹನೀಫ್ ಸಅದಿ ಅಸೈ,ಕಿನ್ಯ ಗ್ರಾಮ ಪಂಚಾಯತ್ ಸದಸ್ಯ ಫಾರೂಖ್ ಕಿನ್ಯ, ಫಯಾಝ್ ಕಿನ್ಯ, ಕಲ್ಕಟ್ಟ ಜುಮುಅ ಮಸ್ಜಿದ್ ಖತೀಬ್ ಇಸ್ಹಾಖ್ ಸಖಾಫಿ, ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿ ಉಪಾಧ್ಯಕ್ಷ ಮೂಸಕುಂಞಿ, ಅಬ್ದುಲ್ ಹಮೀದ್ ಟಿಂಬರ್, ಕಾರ್ಯದರ್ಶಿ ಅಬ್ದುಸ್ಸತ್ತಾರ್, ಇಕ್ಬಾಲ್,ವಿ.ಎ ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ (ಅಮ್ಮಿ)ಮೀಂಪ್ರಿ, ಮಹ್ಬೂಬ್ ಸಖಾಫಿ ಕಿನ್ಯ ಮುಂತಾದವರು ಉಪಸ್ಥಿತರಿದ್ದರು.
ಬುಖಾರಿಯ್ಯಾ ಎಜುಕೇಶನ್ & ಚಾರಿಟಿ ಸೆಂಟರ್ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ ಕಿನ್ಯ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.