janadhvani

Kannada Online News Paper

ಮರ್ಹಬ ಕಮ್ಯೂನಿಟಿ ಟ್ರಸ್ಟ್ ಕೊಡಂಗಾಯಿ- ವಾರ್ಷಿಕ ಮಹಾಸಭೆ ಮತ್ತು ಹೊಸ ಸಾರಥಿಗಳ ಆಯ್ಕೆ

ವಿಟ್ಲ: ಕೊಡಂಗಾಯಿ ಮರ್ಹಬ ಕಮ್ಯೂನಿಟಿ ಟ್ರಸ್ಟ್ MCT ಇದರ ದ್ವಿತೀಯ ಮಹಾಸಭೆ ಇತ್ತೀಚೆಗೆ ನಡೆಯಿತು.

ಧಾರ್ಮಿಕ, ಸಾಮಾಜಿಕ, ಜನಸೇವಾ ಕರ್ಮರಂಗದಲ್ಲಿ ಸದಾ ಮುಂಚೂಣಿಯಲ್ಲಿರುವ ಕೊಡಂಗಾಯಿ ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಹಾಗೆಯೇ ಸಾಂಘಿಕ ಚಟುವಟಿಕೆಗಳಿಗೂ ಹೆಸರುವಾಸಿ. ಇಲ್ಲಿ ಹಿರಿಯರ, ಯುವಕರ ಹಲವು ಸಂಘಟನೆಗಳ ಹಾಗೆಯೇ ಕೌಮಾರ ಪ್ರಾಯದ ಎಳೆ ಹುಡುಗರ ಒಂದು ಸಂಘಟನೆ ಕೂಡಾ ಕ್ರಿಯಾಶೀಲವಾಗಿದೆ.

ಸಂಘಟನೆ ಎಲ್ಲೂ ಮಾಡಬಹುದು, ಯಾರಿಗೂ ಮಾಡಬಹುದು. ಆದರೆ ಸಂಘಟನೆಯ ಸಕ್ರಿಯತೆ ಹೇಗಿದೆ ಎಂಬುದು ಮಾತ್ರ ಮುಖ್ಯವೆನಿಸುತ್ತದೆ.
ಈ ನಿಟ್ಟಿನಲ್ಲಿ ಕೊಡಂಗಾಯಿ ಮಕ್ಕಳ ಮರ್ಹಬ ಕಮ್ಯೂನಿಟಿ ಟ್ರಸ್ಟ್ MCT ತುಂಬಾ ಗಮನ ಸೆಳೆದಿದೆ. ಊರವರಿಂದ ಜನಾದರಣೆ ಪಡೆದಿದೆ.
ಮದುವೆಗೆ ಸಹಾಯ ಧನ, ಇಫ್ತಾರ್ ಕೂಟ ಆಯೋಜನೆ, ರೋಗಿಗಳಿಗೆ ಆರ್ಥಿಕ ನೆರವು, ಸ್ವಚ್ಛತಾ ಕಾರ್ಯಕ್ರಮ, ಪರಿಸರ ದಿನಾಚರಣೆ, ರಕ್ತದಾನ ಶಿಬಿರಕ್ಕೆ ಸಹಕಾರ, ಮೀಲಾದ್ ಕಾರ್ಯಕ್ರಮಕ್ಕೆ ಸಹಕಾರ, ಮನೆ ನಿರ್ಮಾಣಕ್ಕೆ ನೆರವು, ಕೊರೋನಾ ಸಂದರ್ಭದಲ್ಲಿ ಸಹಾಯ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ 2022-23ರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಸರಪುದ್ದೀನ್ ಅಪ್ಪು
ಉಪಾಧ್ಯಕ್ಷರು : ಫೈಝಲ್ ಕೆ
ಪ್ರಧಾನ ಕಾರ್ಯದರ್ಶಿ : ನಿಯಾಝ್ ಎಂಕೆ
ಜೊತೆ ಕಾರ್ಯದರ್ಶಿ : ನಿಶಾದ್,
ಕೋಶಾಧಿಕಾರಿ ಸಾದಿಕ್ ಡಿಕೆ
ಸಂಚಾಲಕ : ಅಬ್ದುಲ್ ಅಹದ್
ಲೆಕ್ಕ ಪರಿಶೋಧಕರ : ತಾಜುದ್ದೀನ್ ಬಿ,
ಕ್ರೀಡಾ ಉಸ್ತುವಾರಿ : ಮುಝಮ್ಮಿಲ್, ಇರ್ಫಾನ್
ಸ್ವಚ್ಚತಾ ಉಸ್ತುವಾರಿ : ಜಬ್ಬಾರ್ ಡಿಕೆ
ಶಿಕ್ಷಣ ಮತ್ತು ಸಾಂತ್ವನ: ನೌಫಲ್ ವೈ
ವಿದೇಶ ಪ್ರತಿನಿಧಿಗಳು: ರಮೀಝ್ ಎಬಿ ಕತರ್ & ಶಮೀರ್ ದುಬೈ
ಪತ್ರಿಕಾ ವರದಿಗಾರು : ಫಾರೂಕ್ ದುಬೈ
ಹಣ ಸಂಗ್ರಹಕರು : ರಮೀಝ್ ಎಂ ಕೆ & ನಿಝಾಮ್ ಕೆಬಿ
ಕಾರ್ಯಾಂಗ ಸದಸ್ಯರು
ಮುಸ್ತಫಾ ತಾಯಿಫ್, ಖಲೀಲ್ ಕೆ, ಇರ್ಶಾದ್, ಝುಬೈರ್ ಮುಂತಾದವರನ್ನು ಆರಿಸಲಾಯಿತು.

✒️ ಫಾರೂಕ್ ಮೂರ್ಜೆಬೆಟ್ಟು DUBAI

error: Content is protected !! Not allowed copy content from janadhvani.com