ಮಂಗಳೂರು: ಮಂಗಳೂರಿನ ಕಂಕನಾಡಿ ಸುಲ್ತಾನ್ ಗೋಲ್ಡ್(Sultan Gold) ಗೆ ಬಜರಂಗ ದಳ ಪುಂಡರು, ಮುಸ್ಲಿಮ್ ಸೇಲ್ಸ್ ಪ್ರತಿನಿಧಿ ಯುವಕನನ್ನು, ಅದೇ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವ ಯುವತಿಯೊಂದಿಗೆ ಸಂಬಂಧ ಕಲ್ಪಿಸಿ, ಸುಲ್ತಾನ್ ಗೋಲ್ಡ್ ಸ್ವರ್ಣಾಭರಣ ಮಳಿಗೆಗೆ ನುಗ್ಗಿ ತೀವ್ರ ಹಲ್ಲೆ ನಡೆಸಿರುವುದನ್ನು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾಗಿ ಕೆ.ಅಶ್ರಫ್ ತೀವ್ರವಾಗಿ ಖಂಡಿಸಿದ್ದಾರೆ.
ಬಜರಂಗ ಪುಂಡರ ಈ ಕೃತ್ಯವು ಪೊಲೀಸು ಅಧಿಕಾರಿಗಳ ಸಮಕ್ಷಮವೇ ನಡೆದಿದ್ದು ವಿಪರ್ಯಾಸ.ಕೃತ್ಯದ ಬಗ್ಗೆ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ಗೋಲ್ಡ್ ನಿಯಂತ್ರಣ ಬೋರ್ಡ್ ಮಧ್ಯ ಪ್ರವೇಶಿಸಿ ಕ್ರಮಕ್ಕಾಗಿ ಒತ್ತಾಯಿಸಬೇಕು.
ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿ ಮುಸ್ಲಿಮ್ ಒಡೆತನದ ಸ್ವರ್ಣ ಮಳಿಗೆಗಳನ್ನು ನಿಷೇಧಿಸಿ, ಹಿಂದೂಗಳು ಯಾರೂ ಕೂಡ ವ್ಯಾಪಾರ ನಡೆಸ ಕೂಡದು ಎಂದು ಕರೆ ನೀಡಿರುವುದರ ಘಟನೆಯ ಮುಂದುವರಿಕೆ ಭಾಗ ಮಂಗಳೂರಿನ ಸ್ವರ್ಣ ಮಳಿಗೆಯ ಯುವಕನ ಮೇಲಿನ ಹಲ್ಲೆ ಎಂದು ತಿಳಿಯಬೇಕಾಗುತ್ತದೆ.
ಜ್ಯುವೆಲ್ಲರ್ಸ್ ಅಸೋಸಿಯೇಶನ್(Jewllers Association) ಈ ಬಗ್ಗೆ ಕ್ರಮಕ್ಕೆ ಒತ್ತಾಯ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯ ಪ್ರತೀ ಸ್ವರ್ಣ ಮಳಿಗೆಗಳನ್ನು ಗ್ರಾಹಕರು ಬಹಿಷ್ಕರಿಸುವ ಬಗ್ಗೆ ಆಂದೋಲನ ಮತ್ತು ಜಾಗೃತಿ ನಡೆಸಲಾಗುವುದು ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ ಕದ್ರಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಯುವತಿ ತಾಯಿ, ಹಲ್ಲೆಗೊಳಗಾದ ಯುವಕ ಮತ್ತು ಸುಲ್ತಾನ್ ಜ್ಯುವೆಲ್ಲರಿ ಮಾಲೀಕರ ದೂರು ಆಧಾರಿಸಿ ಎಫ್ಐಆರ್ ದಾಖಲಾಗಿದೆ.ಮಗಳ ಮೇಲೆ ದೌರ್ಜನ್ಯ ಹಾಗೂ ಬೆದರಿಕೆ ಒಡ್ಡಿದ ಬಗ್ಗೆ ಯುವತಿ ತಾಯಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿ ಗಲಭೆ ಸೃಷ್ಟಿಸಿದ ಬಗ್ಗೆ ಯುವಕ ದೂರು ನೀಡಿದ್ದು, ಜ್ಯುವೆಲ್ಲರಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಜ್ಯುವೆಲ್ಲರಿ ಆಡಳಿತ ದೂರು ದಾಖಲಿಸಿದೆ.
ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಂಗಳೂರಿನ ಲುಕ್ಮಾನ್ ಉಲ್ ಹಕೀಂ ಮೇಲೆ ಹಲ್ಲೆ ನಡೆಸಲಾಗಿತ್ತು.ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯುವತಿಯ ಪೋಷಕರ ಜೊತೆ ಸುಲ್ತಾನ್ ಜ್ಯುವೆಲ್ಲರಿಗೆ ಬಂದಿದ್ದ ಯುವತಿ ಪ್ರಿಯಕರ ಚೇತನ್ ಎಂಬಾತ ಹಲ್ಲೆ ನಡೆಸಿದ್ದಾಗಿ ಲುಕ್ಮಾನ್ ದೂರು ನೀಡಿದ್ದಾನೆ. ಈ ವೇಳೆ ಪೊಲೀಸರ ಜೊತೆ ಸ್ಥಳಕ್ಕೆ ಬಂದಿದ್ದ ಭಜರಂಗದಳ ಕಾರ್ಯಕರ್ತರು ಕೂಡ ಲುಕ್ಮಾನ್ ನನ್ನ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ