ಬಂಟ್ವಾಳ: ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ(SJU) ಡಿಸೆಂಬರ್ 9,10 ದಿನಾಂಕಗಳಲ್ಲಿ ಕಾವಳಕಟ್ಟೆ ಅಲ್ ಖಾದಿಸಾ ಕ್ಯಾಂಪಸ್ಸಿನಲ್ಲಿ ಆಯೋಜಿಸಿರುವ ಉಲಮಾ ಕಾನ್ಫರೆನ್ಸ್(Ulama Conference) ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಕರೆ ನೀಡಿದೆ.
ಎರಡು ದಿನಗಳ ಕಾಲ ನಡೆಯಲಿರುವ ಸಮಾರಂಭದಲ್ಲಿ ಕೇರಳ ಕರ್ನಾಟಕದ ಪ್ರಮುಖ ವಿದ್ವಾಂಸರುಗಳು ಭಾಗವಹಿಸಲಿದ್ದು ಸಕಾಲಿಕವಾದ ವಿವಿಧ ವಿಷಯಗಳಲ್ಲಿ ಸೆಮಿನಾರ್‌ಗಳು ನಡೆಯಲಿದೆ.
ಪ್ರಸ್ತುತ ಸಮ್ಮೇಳನಕ್ಕೆ ಸಂಘಟನೆಯ ಸದಸ್ಯತ್ವ ಪಡೆದಿರುವ ಎಲ್ಲಾ ಉಲಮಾಗಳು ಭಾಗವಹಿಸಿ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಪ್ರಕಟಣೆ ತಿಳಿಸಿದೆ.