janadhvani

Kannada Online News Paper

ಸೌದಿ:ಬಿಕ್ಕಟ್ಟಿನಲ್ಲಿರುವ ವಲಸಿಗರಿಗೆ ಸುವರ್ಣಾವಕಾಶ- ಭಾರತೀಯ ದೂತಾವಾಸದಿಂದ ಫೈನಲ್ ಎಕ್ಸಿಟ್ ವ್ಯವಸ್ಥೆ

ರಿಯಾದ್, ನ.3: ಸೌದಿ ಅರೇಬಿಯಾದಲ್ಲಿ(KSA) ಮನೆಗೆ ತೆರಳಲು ಸಾಧ್ಯವಾಗದೆ ಸಿಲುಕಿರುವವರಿಗೆ ಜಿದ್ದಾ ಭಾರತೀಯ ಕಾನ್ಸುಲೇಟ್(Indian Consulates Jedda) ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನು ಒದಗಿಸಿದೆ.

ಜಿದ್ದಾದಲ್ಲಿರುವ ಭಾರತೀಯ ದೂತಾವಾಸವು, ಇಖಾಮಾವನ್ನು ನವೀಕರಿಸಲು ಸಾಧ್ಯವಾಗದ ಮತ್ತು ಹುರುಬ್ ಸೇರಿದಂತೆ ಇತರ ಬಿಕ್ಕಟ್ಟಿನಿಂದ ಮನೆಗೆ ಹೋಗಲು ಸಾಧ್ಯವಾಗದ ವಲಸಿಗರನ್ನು ಅಂತಿಮ ನಿರ್ಗಮನದಲ್ಲಿ(Fainal Exit) ಕಳುಹಿಸಲು ಅವಕಾಶವನ್ನು ಒದಗಿಸುತ್ತದೆ.

ಮುಂದಿನ ಎರಡು ದಿನಗಳಲ್ಲಿ ಭಾರತೀಯ ದೂತಾವಾಸವನ್ನು ಸಂಪರ್ಕಿಸಬೇಕು ಎಂದು ಕಾನ್ಸುಲೇಟ್ ತಿಳಿಸಿದೆ. ಈ ಅವಕಾಶವನ್ನು ಬಳಸಿಕೊಳ್ಳಲು, http://cgijeddah.org/consulate/exitVisa/reg.aspx ವೆಬ್‌ಸೈಟ್‌ನಲ್ಲಿ “ಫೈನಲ್ ಎಕ್ಸಿಟ್ ವೀಸಾ – ನೋಂದಣಿ ನಮೂನೆ”(Fainal Exit Visa-Registration Form) ಎಂಬ ಟ್ಯಾಗ್‌ನಲ್ಲಿ ವ್ಯಕ್ತಿಯ ಮಾಹಿತಿಯನ್ನು ನಮೂದಿಸುವ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.

ಸೌದಿಯ ಲಾಕ್‌ಡೌನ್‌ಗೆ ಮೊದಲು ಈ ವೆಬ್‌ಸೈಟ್ ಮೂಲಕ ನೋಂದಾಯಿಸಿದವರು ಮತ್ತೆ ನೋಂದಾಯಿಸಿಕೊಳ್ಳಬೇಕೆಂದಿಲ್ಲ. ನೋಂದಾಯಿಸಲು ಸಾಧ್ಯವಾಗದವರು ಕಾನ್ಸುಲೇಟ್ ಅನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಸಂಖ್ಯೆ +966 556122301 ಅನ್ನು ಸಂಪರ್ಕಿಸಿ.

error: Content is protected !! Not allowed copy content from janadhvani.com