janadhvani

Kannada Online News Paper

ಪ್ರಯಾಣಿಕರನ್ನು ಪದೇ ಪದೇ ವಂಚಿಸುತ್ತಿರುವ Air India Express- ಅನಿವಾಸಿಗಳ ಗೋಳು ಕೇಳುವವರಿಲ್ಲ

ಇಂತಹ ಎಡವಟ್ಟುಗಳು, ಬೇಜವಬ್ದಾರಿ ವರ್ತನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಪ್ರಶ್ನಿಸುವವರಾಗಲಿ, ಪ್ರತಿಭಟಿಸುವವರಾಗಲಿ ಕಾಣುತ್ತಿಲ್ಲ

✍️ಇಸ್ಹಾಕ್ ಸಿ.ಐ.ಫಜೀರ್(ಸೌದಿ ಅರೇಬಿಯಾ)

ಸೌದಿ ಅರೇಬಿಯಾ,ನ.3: ದಮ್ಮಾಮ್‌ನಿಂದ ಬುಧವಾರ ರಾತ್ರಿ 10:00 ಗಂಟೆಗೆ ಮಂಗಳೂರಿಗೆ ಹೊರಡಬೇಕಾದ Air India Express ಮೂರು ತಾಸುಗಳ ಕಾಲ ತಡಮಾಡಿ ಪ್ರಯಾಣಿಕರಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಸತಾಯಿಸಿದೆ.

ಇದರಿಂದಾಗಿ ವೃದ್ಧರು, ಪುಟ್ಟ, ಪುಟ್ಟ ಮಕ್ಕಳು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ
ಬೆಳ್ತಂಗಡಿ ಮೂಲದ ಮಹಿಳೆ ಒಬ್ಬರು ವಿಮಾನ ನಿಲ್ದಾಣದ ವೈಟಿಂಗ್ ರೂಮಿನಲ್ಲಿ ನರಳಾಡುವಂಥಾ ಪರಿಸ್ಥಿತಿ ಎದುರಾಗಿದೆ.

Air India express ನಿಂದ
ಇದು ಹೊಸತೇನಲ್ಲ. ಇಂತಹ ಎಡವಟ್ಟುಗಳು, ಬೇಜವಬ್ದಾರಿ ವರ್ತನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಪ್ರಶ್ನಿಸುವವರಾಗಲಿ, ಪ್ರತಿಭಟಿಸುವವರಾಗಲಿ ಅಥವಾ
ವರದಿಯಾಗಲಿ ಪ್ರಕಟಣೆಯಾಗುವುದು ಭಾರೀ ಅಪರೂಪ.

ಮಸೀದಿ, ಬಸದಿ, ಮಂದಿರ, ಇಗರ್ಜಿ ಹಾಗೂ ಬಡವರಿಗೆ ಮನೆ ನಿರ್ಮಾಣ, ಮದುವೆಗೆ ಆರ್ಥಿಕ ನೆರವು ನೀಡುವುದರಲ್ಲಿ ಅನಿವಾಸಿಗಳ ದುಡಿಮೆಯ ಸಿಂಹಪಾಲು ಇದೆ ಎಂಬುದನ್ನು ಯಾರೂ ಕೂಡ ಮರೆಯಬಾರದು.

ಮಂಗಳೂರು ಹಾಗೂ ಆಸುಪಾಸಿನ ಮಹಾ ಜನತೆ Air India ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಬಿಸಿ ಮುಟ್ಟಿಸ ಬೇಕಿದೆ.